ಕಪ್ಪುಹಣ ಬಿಳುಪು ಪ್ರಕರಣ | ಛಗನ್ಭುಜಬಲ್ ಜಾಮೀನು ರದ್ದತಿಗೆ ಸುಪ್ರೀಂಕೋರ್ಟ್ ನಕಾರ

ಛಗನ್ ಭುಜಬಲ್ | PTI
ಹೊಸದಿಲ್ಲಿ: ಮಹಾರಾಷ್ಟ್ರ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಛಗನ್ ಭುಜಬಲ್ ಹಾಗೂ ಅವರ ಸೋದರನ ಪುತ್ರ ಸಮೀರ್ ಭುಜಬಲ್ ಅವರಿಗೆ ನೀಡಿದ್ದ ಜಾಮೀನನ್ನು ರದ್ದುಪಡಿಸೇಕೆಂದು ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ಛಗನ್ ಭುಜಬಲ್ ಅವರು ರಾಜ್ಯ ಲೋಕೋಪಯೋಗಿ ಇಲಾಖೆಯ ಸಚಿವರಾಗಿದ್ದಾಗ ದಿಲ್ಲಿಯಲ್ಲಿ ಮಹಾರಾಷ್ಟ್ರ ಸದನ ನಿರ್ಮಾಣಕ್ಕೆ ಗುತ್ತಿಗೆಯನ್ನು ನೀಡುವಲ್ಲಿ ಆಕ್ರಮಗಳು ನಡೆದಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ನಾಶಿಕ್ ಜಿಲ್ಲೆಯ ಯೆವೊಲಾ ಕ್ಷೇತ್ರದ ಶಾಸಕರಾದ ಛಗನ್ ಭುಜಬಲ್ಪ್ರಸಕ್ತ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷದ ಸದಸ್ಯರಾಗಿದ್ದಾರೆ.
ವಂಚನೆ ಹಾಗೂ ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವರಾದ ಭುಜಬಲ್ ಅವರನ್ನು 2016ರ ಮಾರ್ಚ್ 14ರಂದು ಬಂಧಿಸಲಾಗಿತ್ತು. ಆ ವರ್ಷದ ಡಿಸೆಂಬರ್ನಲ್ಲಿ ಭುಜಬಲ್ ಅವರು ಕಪ್ಪು ಹಣ ಬಿಳುಪು ತಡೆ ಕಾಯ್ದೆಯಡಿ ತನ್ನ ಬಂಧನವನ್ನು ಪ್ರಶ್ನಿಸಿ
ಸಲ್ಲಿಸಿದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು ಆದಾಗ್ಯೂ 2018ರ ಮೇ ತಿಂಗಳಲ್ಲಿ ಅವರಿಗೆ ಹೈಕೋರ್ಟ್ ಜಾಮೀನು ಬಿಡುಗಡೆಗೊಳಿಸಿತ್ತು.





