ಐವರ ಖಾಯಂ ನ್ಯಾಯಾಧೀಶರಾಗಿ ನೇಮಕಕ್ಕೆ ಸುಪ್ರೀಂ ಕೋರ್ಟ್ ಕೊಲೀಜಿಯಂ ಒಪ್ಪಿಗೆ

ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ, ಫೆ. 4: ಮದ್ರಾಸ್ ಹಾಗೂ ತೆಲಂಗಾಣ ಉಚ್ಚ ನ್ಯಾಯಾಲಯಗಳ ಐವರು ಹೆಚ್ಚುವರಿ ನ್ಯಾಯಾಧೀಶರನ್ನು ಖಾಯಂ ನ್ಯಾಯಾಧೀಶರನ್ನಾಗಿ ನೇಮಕ ಮಾಡಬೇಕೆಂಬ ಪ್ರಸ್ತಾವಕ್ಕೆ ಸುಪ್ರೀಂ ಕೋರ್ಟ್ ಕೊಲೀಜಿಯಂ ಬುಧವಾರ ಅನುಮತಿ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಕೊಲೀಜಿಯಂ ಸಭೆ ಬುಧವಾರ ನಡೆಯಿತು.
‘‘2025 ಫೆಬ್ರವರಿ 5ರಂದು ನಡೆದ ಸಭೆಯಲ್ಲಿ ಸುಪ್ರೀಂ ಕೋರ್ಟ್ ಕೊಲೀಜಿಯಂ ಹೆಚ್ಚುವರಿ ನ್ಯಾಯಮೂರ್ತಿಗಳಾದ ವೆಂಕಟಾಚಾರಿ ಲಕ್ಷ್ಮೀನಾರಾಯಣನ್ ಹಾಗೂ ಪೆರಿಯಸ್ವಾಮಿ ವಡಮಲೈ ಅವರನ್ನು ಮದ್ರಾಸ್ ಉಚ್ಚ ನ್ಯಾಯಾಲಯದ ಖಾಯಂ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವ ಪ್ರಸ್ತಾವನೆಯನ್ನು ಅಂಗೀಕರಿಸಿದೆ ಎಂದು ಕೊಲೀಜಿಯಂನ ಹೇಳಿಕೆ ತಿಳಿಸಿದೆ.
ಹೆಚ್ಚುವರಿ ನ್ಯಾಯಾಧೀಶರಾದ ಲಕ್ಷ್ಮೀನಾರಾಯಣ ಅಲಿಶೆಟ್ಟಿ, ಅನಿಲ್ ಕುಮಾರ್ ಜುಕಾಂತಿ ಹಾಗೂ ಸುಜನಾ ಕಲಾಸಿಕಮ್ ಅವರನ್ನು ತೆಲಂಗಾಣ ಉಚ್ಚ ನ್ಯಾಯಾಲಯದ ಖಾಯಂ ನ್ಯಾಯಾಧೀಶರಾಗಿ ನೇಮಕ ಮಾಡಬೇಕೆಂಬ ಪ್ರಸ್ತಾವನೆಗೆ ಕೊಲೀಜಿಯಂ ಅನುಮತಿ ನೀಡಿದೆ ಎಂದು ಇನ್ನೊಂದು ಹೇಳಿಕೆ ತಿಳಿಸಿದೆ.