ರಾಸಾಯನಿಕ ತ್ಯಾಜ್ಯ ವಿಲೇವಾರಿ ನಿಲ್ಲಿಸಲು ಸುಪ್ರೀಂ ಕೋರ್ಟ್ ನಿರಾಕರಣೆ

ಸುಪ್ರೀಂ ಕೋರ್ಟ್ | PTI
ಭೋಪಾಲ: ಭೋಪಾಲದ ನಿಷ್ಕ್ರಿಯ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ 40 ವರ್ಷ ಹಳೆಯ ರಾಸಾಯನಿಕ ತ್ಯಾಜ್ಯವನ್ನು ಪೀತಂಪುರದಲ್ಲಿ ವಿಲೇವಾರಿ ಮಾಡಲು ಅವಕಾಶ ನೀಡಿದ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಆದೇಶದ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ಕಾರ್ಖಾನೆಯ ರಾಸಾಯನಿಕ ತ್ಯಾಜ್ಯವನ್ನು ಮೂರು ಹಂತಗಳಲ್ಲಿ ಪ್ರಾಯೋಗಿಕವಾಗಿ ದಹಿಸಲು ರಾಜ್ಯ ಸರಕಾರಕ್ಕೆ ಉಚ್ಚ ನ್ಯಾಯಾಲಯ ಫೆ. 18ರಂದು ಅನುಮತಿ ನೀಡಿತ್ತು.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಹಾಗೂ ಎ.ಜಿ. ಮಸಿಹ್ ಅವರ ಪೀಠ ಉಚ್ಚ ನ್ಯಾಯಾಲಯವನ್ನು ಮತ್ತೊಮ್ಮೆ ಸಂಪರ್ಕಿಸಲು ದೂರುದಾರರಿಗೆ ಅವಕಾಶ ನೀಡಿದೆ.
1984 ಡಿಸೆಂಬರ್ನಲ್ಲಿ ಭೋಪಾಲದಲ್ಲಿರುವ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ನ ಕೀಟನಾಶಕ ಘಟಕದಿಂದ ಮೀಥೈಲ್ ಐಸೋಸಯನೇಟ್ ಹಾಗೂ ಇತರ ವಿಷಕಾರಿ ಅನಿಲಗಳು ಸೋರಿಕೆಯಾಗಿದ್ದವು. ಇದರ ಪರಿಣಾಮ ಅನಂತರದ ದಿನಗಳಲ್ಲಿ ಕನಿಷ್ಠ 4 ಸಾವಿರ ಜನರು ಸಾವನ್ನಪ್ಪಿದ್ದರು.
Next Story





