ಎನ್ಎಸ್ಎ ಕಾಯ್ದೆಯಡಿ ಕಾನೂನು ವಿದ್ಯಾರ್ಥಿಯ ಬಂಧನ ಅಸಮರ್ಥನೀಯ: ಸುಪ್ರೀಂ ಕೋರ್ಟ್
ತಕ್ಷಣವೇ ಬಿಡುಗಡೆಗೆ ಆದೇಶ

ಸುಪ್ರೀಂ ಕೋರ್ಟ್ | PC : X
ಹೊಸದಿಲ್ಲಿ: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮಧ್ಯಪ್ರದೇಶದ ಕಾನೂನು ವಿದ್ಯಾರ್ಥಿಯ ಬಂಧನವು ಅಸಮರ್ಥನೀಯವಾಗಿದ್ದು, ಆತನನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಸುಪ್ರೀಂಕೋರ್ಟ್ ಶನಿವಾರ ಆದೇಶ ನೀಡಿದೆ.
ಕಾನೂನು ವಿದ್ಯಾರ್ಥಿ ಅನ್ನು ಎಂಬಾತನ ವಿರುದ್ಧ 2024ರ ಜುಲೈ 11ರಂದು ಮಧ್ಯಪ್ರದೇಶದ ಬೆತುಲ್ ಜಿಲ್ಲಾ ನ್ಯಾಯಾಲಯ ಹೊರಡಿಸಿದ ಬಂಧನ ಆದೇಶವು ಲೋಪದಿಂದ ಕೂಡಿದ ಎಂದು ನ್ಯಾಯಮೂರ್ತಿಗಳಾದ ಉಜ್ಜಲ್ ಭೂಯಾನ್ ಹಾಗೂ ಕೆ.ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.
ಬೆತುಲ್ ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ಪ್ರೊಫೆಸರ್ ಮೇಲೆ ಹಲ್ಲೆ ನಡೆಸಿದ ಅನ್ನು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಕೊಲೆ ಯತ್ನ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಅಪರಾಧಗಳಿಗಾಗಿ ಆನ್ನು ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.
ಜೈಲಿನಲ್ಲಿರುವಾಗ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಆತನ ವಿರುದ್ಧ ಬಂಧನಾದೇಶ ಹೊರಡಿಸಲಾಗಿತ್ತು ಹಾಗೂ ಈ ಆದೇಶವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ವಿಸ್ತರಿಸುತ್ತಾ ಬರಲಾಗುತ್ತಿತ್ತು.
ಆರೋಪಿಯನ್ನು ಪ್ರತಿಬಂಧತ್ಮಾಕ ಕಸ್ಟಡಿಗೆ ತೆಗೆದುಕೊಂಡಿರುವುದು 1980ರ ರಾಷ್ಟ್ರೀಯ ಭದ್ರತಾ ಕಾಯ್ದೆಯ ಸೆಕ್ಷನ್ 3ರ ಉಪವರ್ಗದ ನಿಯಮಾವಳಿಗಳಿಗೆ ಅನುಗುಣವಾಗಿಲ್ಲ. ಹೀಗಾಗಿ ಆತನ ಪ್ರತಿಬಂಧತ್ಮಾಕ ಬಂಧನವು ಸಂಪೂರ್ಣವಾಗಿ ಅಸಮರ್ಥನೀಯ’’ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠವು ಶುಕ್ರವಾರ ಆ ನಡಿದ ತೀರ್ಪಿನಲ್ಲಿ ತಿಳಿಸಿದೆ.







