ಬೆಂಗಳೂರು ಅರಮನೆ ಮೈದಾನ ವಿವಾದ: ಟಿಡಿಆರ್ ಪ್ರಮಾಣಪತ್ರ ಕುರಿತ ಆದೇಶ ಅಮಾನತುಗೊಳಿಸಿದ ಸುಪ್ರೀಂಕೋರ್ಟ್

Photo credit: PTI
ಹೊಸದಿಲ್ಲಿ: ಬಳ್ಳಾರಿ ಮತ್ತು ಜಯಮಹಲ್ ರಸ್ತೆಗಳ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡ ಬೆಂಗಳೂರು ಅರಮನೆ ಮೈದಾನದ 15 ಎಕರೆ ಭೂಮಿಗಾಗಿ ಮೈಸೂರು ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ವಾರಸುದಾರರಿಗೆ ಮತ್ತು ಇತರರಿಗೆ ಸುಮಾರು 3400 ಕೋಟಿ ರೂಪಾಯಿ ಮೌಲ್ಯದ ಟ್ರಾನ್ಸ್ ಫರೇಬಲ್ ಡೆವಲಪ್ಮೆಂಟ್ ರೈಟ್ಸ್ ಪ್ರಮಾಣಪತ್ರವನ್ನು ಹಸ್ತಾಂತರಿಸುವ ಸಂಬಂಧ ಈ ಮೊದಲು ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಗುರುವಾರ ಅಮಾನತುಗೊಳಿಸಿದೆ. ಇದರಿಂದ ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ನಿರಾಳವಾದಂತಾಗಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದೀಪಂಕರ್ ದತ್ತಾ ಮತ್ತು ಎನ್.ಕೋಟೀಶ್ವರ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ, ಎಲ್ಲ ಟಿಡಿಆರ್ ಪ್ರಮಾಣಪತ್ರಗಳನ್ನು ರಿಜಿಸ್ಟ್ರಿಯಲ್ಲಿ ಠೇವಣಿ ಇರುತ್ತವೆ ಹಾಗೂ ಒಂದು ವೇಳೆ ಬಿಡುಗಡೆ ಮಾಡಿದಲ್ಲಿ, ಅವುಗಳನ್ನು ಬಳಸಿಕೊಳ್ಳಲಾಗದು ಅಥವಾ ಮೂರನೇ ವ್ಯಕ್ತಿಯ ಹಕ್ಕನ್ನು ಸೃಷ್ಟಿಸಲಾಗದು ಎಂದು ಸ್ಪಷ್ಟಪಡಿಸಿದೆ.
ಟಿಡಿಆರ್ ಪ್ರಮಾಣಪತ್ರಗಳ ಬಿಡುಗಡೆಗೆ ಸೂಚಿಸಿ ಮೇ 22ರಂದು ನೀಡಿದ್ದ ತೀರ್ಪಿನ ಬಗ್ಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪರಾಮರ್ಶನ ಅರ್ಜಿಯ ವಿಚಾರಣೆಯನ್ನು ಜುಲೈ 21ರಂದು ನಡೆಸಲು ದಿನಾಂಕ ನಿಗದಿಪಡಿಸಲಾಯಿತು.
"ಒಂದು ವೇಳೆ ಪರಾಮರ್ಶನ ಅರ್ಜಿಯನ್ನು ತಿರಸ್ಕರಿಸಿದರೆ, ಮಧ್ಯಂತರ ನಿರ್ದೇಶನಗಳು, ಆದೇಶ ಹೊರಡಿಸಿದ ದಿನಾಂಕದಿಂದ ನಾಲ್ಕು ವಾರಗಳ ಕಾಲ ಅಥವಾ ಮೂವರು ನ್ಯಾಯಾಧೀಶರ ಪೀಠ ವಿಚಾರಣೆ ನಡೆಸುವವರೆಗೆ, ಯಾವುದು ವಿಳಂಬವೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತವೆ" ಎಂದು ಸ್ಪಷ್ಟಪಡಿಸಿದೆ.
ಮುಖ್ಯ ಸಿವಿಲ್ ದಾವೆಯನ್ನು 2025ರ ಆಗಸ್ಟ್ 18ರಂದು ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ.
ನ್ಯಾಯಾಲಯ ನಿಂದನೆ ಪ್ರಕ್ರಿಯೆಯಡಿ ಮೇ 22ರಂದು ಸೂಚಿಸಿದ್ದ ನಿರ್ದೇಶನಗಳ ಪರಿಷ್ಕರಣೆಗಾಗಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಹಿರಿಯ ವಕೀಲ ಕಪಿಲ್ ಸಿಬಾಲ್ ಸರ್ಕಾರದ ಪರ ವಾದ ಮಂಡಿಸಿದರು. ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ನಿಶಾಂತ್ ಪಾಟೀಲ್ ಸರ್ಕಾರದ ಪರ ಹಾಜರಾದರು.
ಕೆ.ಎ.ಗಂಗೂಲಿ ಮತ್ತು ಗೋಪಾಲ ಶಂಕರನಾರಾಯಣನ್ ಪ್ರತಿವಾದಿಗಳ ಪರ ವಾದ ಮಂಡಿಸಿ, ರಾಜ್ಯ ಸರ್ಕಾರ ಈ ಮೊದಲು ಮಂಡಿಸಿದ ವಾದ ಹಲವು ಬಾರಿ ತಿರಸ್ಕø ತಗೊಂಡಿವೆ ಎಂದು ಹೇಳಿದರು.







