ಸ್ವಚ್ಛತಾ ಹಿ ಸೇವಾ ಅಭಿಯಾನ ಸಮಾರೋಪ : 15 ದಿನಗಳ ಅಭಿಯಾನದಲ್ಲಿ 16 ಕೋಟಿ ಜನರು ಭಾಗಿ

Photo Credit : ddnews.gov.in
ಹೊಸದಿಲ್ಲಿ, ಅ.2: ಕೇಂದ್ರ ಗೃಹ ಹಾಗೂ ನಾಗರಿಕ ವ್ಯವಹಾರಗಳ ಸಟಿವಾಲಯ ಮತ್ತು ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ (ಡಿಡಿಡಬ್ಲ್ಯು ಎಸ್)ಜಂಟಿಯಾಗಿ ಸೆಪ್ಟೆಂಬರ್ 17ರಿಂದ ಆಕ್ಟೋಬರ್ 2ರವರೆಗೆ ಆಯೋಜಿಸಿದ್ದ ಸ್ವಚ್ಛತಾ ಹಿ ಸೇವಾ ಅಭಿಯಾನ 2025 ಗಾಂಧಿ ಜಯಂತಿ ದಿನವಾದ ಗುರುವಾರ ಸಮಾರೋಪಗೊಂಡಿದೆ.
ದೇಶಾದ್ಯಂತ 15 ದಿನಗಳ ಕಾಲ ಆಯೋಜಿಸಲಾದ ಸ್ವಚ್ಛತಾ ಹಿ ಸೇವಾ (ಎಸ್ಎಚ್ಎಸ್) ಅಭಿಯಾನದಲ್ಲಿ 16 ಕೋಟಿಗೂ ಅಧಿಕ ಸಂಖ್ಯೆಯ ಪೌರರು ಪಾಲ್ಗೊಂಡಿದ್ದರು. ಈ ಅವಧಿಯಲ್ಲಿ ಸುಮಾರು 14 ಲಕ್ಷ ಸ್ವಚ್ಛತೆಯ ಲಕ್ಷ್ಯವಿರಿಸಲಾದ ಘಟಕಗಳು ( ತ್ಯಾಜ್ಯ ವಿಲೇವಾರಿ ಸ್ಥಳಗಳು, ತ್ಯಾಜ್ಯಗುಂಡಿಗಳು ಇತ್ಯಾದಿ) ಆಗೂ ಐದು ಲಕ್ಷ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲಾಯಿತು. ನೈರ್ಮಲ್ಯ ಕಾರ್ಮಿಕ ಸುರಕ್ಷತೆ ಹಾಗೂ ಘನತೆಯ ಬಗ್ಗೆ ಜಾಗೃತಿ ಮೂಡಿಸಲು 1.5 ಲಕ್ಷಕ್ಕೂ ಅಧಿಕ ಸಫಾಯಿ ಮಿತ್ರ ಸುರಕ್ಷಾ ಶಿಬಿರಗಳನ್ನು ಏರ್ಪಡಿಸಲಾಗಿತ್ತು.
ಜಲಶಕ್ತಿ ಸಚಿವಾಲಯ ಹಿರಿಯ ಅಧಿಕಾರಿಗಳ ಸಾಮೂಹಿಕ ಶ್ರಮದಾನದ ಮೂಲಕ ಸ್ವಚ್ಛ ಭಾರತ್ ದಿವಸ್ ಆಚರಿಸಿದೆ.
ಸ್ವಚ್ಛತಾ ಹಿ ಸೇವಾ ಅಭಿಯಾನದಲ್ಲಿ ದೇಶಾದ್ಯಂತ 16 ಕೋಟಿ ನಾಗರಿಕರು ಪಾಲ್ಗೊಂಡಿದ್ದು, 14 ಲಕ್ಷ ಸ್ವಚ್ಛತೆಯ ಲಕ್ಷ್ಯವಿರಿಸಲಾದ ಘಟಕಗಳು (ಸಿಟಿಯು) ಹಾಗೂ ಐದು ಲಕ್ಷ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲಾಯಿತು.
ಅಭಿಯಾನದ ಪ್ರಗತಿಯ ಪರಾಮರ್ಶೆ ನಡೆಸಿರುವ ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲೀಕರಣ ಇಲಾಖೆಯ ಕಾರ್ಯದರ್ಶಿ ಆಶೋಕ್ ಕೆ.ಮೀನಾ ಅವರು ಅಭಿಯಾನದಲ್ಲಿ ಪಾಲ್ಗೊಳ್ಳಲು ವಿವಿಧ ಸಂಘ, ಸಂಸ್ಥೆಗಳನ್ನು ಒಗ್ಗೂಡಿಸುವಲ್ಲಿ ಗ್ರಾಮಪಂಚಾಯತ್ಗಳು ಹಾಗೂ ಜಿಲ್ಲಾಡಳಿತಗಳ ಕೊಡುಗೆಯನ್ನು ಶ್ಲಾಘಿಸಿದರು. ಸುಸ್ಥಿರವಾದ ಸ್ವಚ್ಛತಾ ಅಭಿಯಾನದ ಮೂಲಕ ಮಾದರಿಯಾಗುವಂತೆ ಅವರು ಅಧಿಕಾರಿಗಳನ್ನು ಆಗ್ರಹಿಸಿದರು.
ಸ್ವಚ್ಛತಾ ಹಿ ಸೇವಾ ಅಭಿಯಾನವು ನಿಜಕ್ಕೂ ಜನತೆಯ ಆಂದೋಲನವಾಗಿ ವಿಕಸಿತವಾಗಿದೆ. ಸಾಮುದಾಯಿಕ ಪಾಲ್ಗೊಳ್ಳುವಿಕೆ ಹಾಗೂ ಸ್ವಚ್ಛ ಹಾಗೂ ಸ್ವಸ್ಥ ಭಾರತದ ದೃಢಸಂಕಲ್ಪದಿಂದ ಶಕ್ತಿ ಪಡೆದುಕೊಂಡಿದೆ ಎಂದು ಮೀನಾ ತಿಳಿಸಿದರು.







