ಜಿ-20 ಶೃಂಗಸಭೆಯಲ್ಲಿ ರಿಷಿ ಸುನಕ್ ಹಾಗೂ ಶೇಖ್ ಹಸೀನಾ ನಡುವೆ ಸುಮಧುರ ಭೇಟಿ

Photo: NDTV
ಹೊಸದಿಲ್ಲಿ: ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ಮಂಡಿಯೂರಿ ಕುಳಿತಿರುವ ರಿಷಿ ಸುನಕ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರೊಂದಿಗೆ ಮಾತುಕತೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಎಂದು ndtv.com ವರದಿ ಮಾಡಿದೆ.
ಈ ಚಿತ್ರವನ್ನು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಬಳಕೆದಾರರೊಬ್ಬರು, #G20 ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ “ಯಾವುದೇ ಅಹಂ ಇಲ್ಲದ ದೊಡ್ಡ ಮನುಷ್ಯ! ಬ್ರಿಟನ್ ನ ಪ್ರಧಾನಿ ರಿಷಿ ಸುನಕ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರೊಂದಿಗೆ ಅವರ ಸರಿಸಮಕ್ಕೆ ಆರಾಮವಾಗಿ ನೆಲದ ಮೇಲೆ ಕೂತಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು ಆ ಚಿತ್ರವನ್ನು ಹಂಚಿಕೊಂಡು, ಸುಂದರ ಹಾಗೂ ಚಿತ್ತಾಕರ್ಷಕ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ರವಿವಾರ ಬೆಳಗ್ಗೆ ದಿಲ್ಲಿಯ ಅಕ್ಷರ ಧಾಮ ದೇವಾಲಯಕ್ಕೆ ತಮ್ಮ ಪತ್ನಿ ಅಕ್ಷತಾ ಮೂರ್ತಿಯೊಂದಿಗೆ ಭೇಟಿ ನೀಡಿದ ರಿಷಿ ಸುನಕ್, ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಭಾರತಕ್ಕೆ ಪ್ರಥಮ ಅಧಿಕೃತ ಭೇಟಿ ನೀಡಿರುವ ರಿಷಿ ಸುನಕ್, ನನ್ನ ಭಾರತೀಯ ಬೇರುಗಳು ಹಾಗೂ ಭಾರತದೊಂದಿಗಿನ ಸಂಬಂಧದ ಬಗ್ಗೆ ನನಗೆ ತೀವ್ರ ಹೆಮ್ಮೆಯಿದೆ ಎಂದು ಹೇಳಿಕೊಂಡರು. ಅಲ್ಲದೆ, ನಾನು ಹೆಮ್ಮೆಯ ಹಿಂದೂ ಎಂದೂ ಪ್ರತಿಪಾದಿಸಿದರು.
Big man don't have ego! Prime Minister Rishi Sunak of UK sat down on the floor to match the comfort - in a tetatete with with Prime Minister Sheikh Hasina. #G20 pic.twitter.com/6oAbzuskbd
— Ayanangsha Maitra (@Ayanangsha) September 10, 2023







