ಬೈಕ್ ನಲ್ಲಿ ಪ್ರಯಾಣಿಸುವಾಗ ರೀಲ್ಸ್ ಮಾಡಲು ಯತ್ನಿಸಿ ತಡೆಗೋಡೆಗೆ ಢಿಕ್ಕಿ; ಓರ್ವ ಮೃತ್ಯು, ಮತ್ತೋರ್ವನಿಗೆ ಗಂಭೀರ ಗಾಯ

Screengrab from the video | PC: X
ಬೀಡ್: ಬೈಕ್ ನಲ್ಲಿ ಪ್ರಯಾಣಿಸುವಾಗ ರೀಲ್ಸ್ ಮಾಡಲು ಯತ್ನಿಸಿ ಬೈಕ್ ಸವಾರರು ರಸ್ತೆ ತಡೆಗೋಡೆಯೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಮತ್ತೊಬ್ಬ ತನ್ನೆರಡು ಕಾಲುಗಳನ್ನೂ ಕಳೆದುಕೊಂಡಿರುವ ಘಟನೆ ಶುಕ್ರವಾರ ಬೀಡ್ ಬೈಪಾಸ್ ರಸ್ತೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಬೈಕ್ ಮೇಲೆ ಸವಾರಿ ಮಾಡುತ್ತಿದ್ದ ಬೈಕ್ ಸವಾರ ಹಾಗೂ ಹಿಂಬದಿ ಸವಾರನು ರೀಲ್ಸ್ ಮಾಡಲು ಮುಗುಳ್ನಗುತ್ತಾ ಮುಂದೆ ಸಾಗುವಾಗ, ಬೈಕ್ ಸವಾರನು ನಿಯಂತ್ರಣ ಕಳೆದುಕೊಂಡಿದ್ದರಿಂದ ರಸ್ತೆ ತಡೆಗೋಡೆಗೆ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಈ ಘಟನೆಯ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು, “ಘಟನೆಯಲ್ಲಿ ಹಿಂಬದಿ ಸವಾರ ಅನಿರುದ್ಧ್ ಕಲ್ಕುಂಬೆ (25) ಮೃತಪಟ್ಟಿದ್ದರೆ, ಬೈಕ್ ಸವಾರ ಮಧು ಶೆಲ್ಕೆ ತನ್ನೆರಡು ಕಾಲುಗಳನ್ನೂ ಕಳೆದುಕೊಂಡಿದ್ದಾನೆ. ಘಟನೆ ನಡೆದಾಗ ಅವರಿಬ್ಬರೂ ಬೀಡ್ ನಿಂದ ತುಲ್ಜಾಪುರಕ್ಕೆ ತೆರಳುತ್ತಿದ್ದರು” ಎಂದು ಹೇಳಿದ್ದಾರೆ.
In #Maharashtra's #Solapur, a man lost his life while another severely injured after their bike hit a divider while making reel on the #DhuleSolapurHighway on Saturday.
— Hate Detector (@HateDetectors) July 6, 2024
The rider lost his life while the pillion is said to be in critical condition. Their bike hit the divider… pic.twitter.com/xPWLe2HkmR