ಕೇಂದ್ರದ ಬಿಜೆಪಿ ಸರಕಾರಕ್ಕೆ ಸೆನ್ಸಾರ್ ಮಂಡಳಿ ಹೊಸ ಆಯುಧ: ತಮಿಳುನಾಡು ಸಿಎಂ ಸ್ಟಾಲಿನ್ ವಾಗ್ದಾಳಿ

ಎಂ.ಕೆ.ಸ್ಟಾಲಿನ್ | Photo Credit : PTI
ಚೆನ್ನೈ: ಕೇಂದ್ರದಲ್ಲಿನ ಬಿಜೆಪಿ ಸರಕಾರಕ್ಕೆ ಸೆನ್ಸಾರ್ ಮಂಡಳಿ ಹೊಸ ಆಯುಧವಾಗಿ ಬದಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.
ನಟ, ತಮಿಳ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಅವರ ‘ಜನನಾಯಗನ್’ ಚಲನಚಿತ್ರ ಬಿಡುಗಡೆಗೆ ಇನ್ನು ಕೆಲವೇ ದಿನಗಳಿರುವಾಗ, ಆ ಚಿತ್ರವನ್ನು ಸಿಬಿಎಫ್ಸಿ ಪರಿಶೀಲನೆಗೆ ಒಪ್ಪಿಸಿರುವ ಹಿನ್ನೆಲೆಯಲ್ಲಿ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ.
‘ಜನನಾಯಗನ್’ ಚಲನಚಿತ್ರವನ್ನು ಉಲ್ಲೇಖಿಸದೆಯೇ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಎಂ.ಕೆ.ಸ್ಟಾಲಿನ್, “ಸಿಬಿಐ, ಈಡಿ, ಐಟಿಯ ನಂತರ ಸೆನ್ಸಾರ್ ಮಂಡಳಿ ಬಿಜೆಪಿ ಸರಕಾರದ ಹೊಸ ಆಯುಧವಾಗಿ ಬದಲಾಗಿದೆ. ಇದು ತೀವ್ರ ಖಂಡನೀಯ” ಎಂದು ವಾಗ್ದಾಳಿ ನಡೆಸಿದ್ದಾರೆ.
Next Story





