ಏರ್ ಇಂಡಿಯಾ ವಿಮಾನ ದುರಂತದ ಸಂತ್ರಸ್ತರಿಗೆ 500 ಕೋಟಿ ರೂಪಾಯಿಯ ಟ್ರಸ್ಟ್ ರಚಿಸಿದ ಟಾಟಾ ಗ್ರೂಪ್

Photo | hindustantimes
ಹೊಸದಿಲ್ಲಿ : ಏರ್ ಇಂಡಿಯಾ ವಿಮಾನ ದುರಂತದ ಸಂತ್ರಸ್ತರಿಗಾಗಿ 500 ಕೋಟಿ ರೂಪಾಯಿಯ ಕಲ್ಯಾಣ ಟ್ರಸ್ಟ್ ರಚಿಸುವುದಾಗಿ ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್ಗಳು ಶುಕ್ರವಾರ ಘೋಷಿಸಿವೆ.
'AI-171 ಸ್ಮಾರಕ ಮತ್ತು ಕಲ್ಯಾಣ ಟ್ರಸ್ಟ್' ಅನ್ನು ಮುಂಬೈನಲ್ಲಿ ನೋಂದಾಯಿಸಲಾಗಿದೆ. ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್ ತಲಾ 250 ಕೋಟಿ ರೂ.ದೇಣಿಗೆಯನ್ನು ಈ ಟ್ರಸ್ಟ್ಗೆ ನೀಡುತ್ತಿದೆ. ಇದರಲ್ಲಿ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಘೋಷಿಸಿರುವ 1 ಕೋಟಿ ರೂ. ಪರಿಹಾರದ ಮೊತ್ತವು ಸೇರಿದೆ.
ಅಹ್ಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿದ ಒಂದು ತಿಂಗಳ ಬಳಿಕ ನೂತನ ಟ್ರಸ್ಟ್ ರಚಿಸಲಾಗಿದೆ. ಟ್ರಸ್ಟ್ ವಿಮಾನ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡವರ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಭರಿಸಲಿದೆ. ಅದೇ ರೀತಿ ಹಾನಿಗೊಳಗಾದ ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್ನ ನವೀಕರಣಕ್ಕೆ ಸಹಕಾರವನ್ನು ನೀಡಲಿದೆ ಎಂದು ತಿಳಿದು ಬಂದಿದೆ.
Next Story





