Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಟೆಕ್ ಕ್ಷೇತ್ರದಲ್ಲಿ ಮುಂದುವರಿದ ಉದ್ಯೋಗ...

ಟೆಕ್ ಕ್ಷೇತ್ರದಲ್ಲಿ ಮುಂದುವರಿದ ಉದ್ಯೋಗ ಕಡಿತ ಪರ್ವ: 2025ರಲ್ಲಿ ಒಂದು ಲಕ್ಷ ಉದ್ಯೋಗಿಗಳ ವಜಾ

ವಾರ್ತಾಭಾರತಿವಾರ್ತಾಭಾರತಿ3 July 2025 4:22 PM IST
share
ಟೆಕ್ ಕ್ಷೇತ್ರದಲ್ಲಿ ಮುಂದುವರಿದ ಉದ್ಯೋಗ ಕಡಿತ ಪರ್ವ: 2025ರಲ್ಲಿ ಒಂದು ಲಕ್ಷ ಉದ್ಯೋಗಿಗಳ ವಜಾ

ವಾಷಿಂಗ್ಟನ್,ಜು.3: ಟೆಕ್ ಕ್ಷೇತ್ರದಲ್ಲಿ ಬಿಕ್ಕಟ್ಟು 2025ರಲ್ಲಿಯೂ ಮುಂದುವರಿದಿದೆ. ಈ ವರ್ಷ ಜಾಗತಿಕವಾಗಿ ಒಂದು ಲ.ಕ್ಕೂ ಅಧಿಕ ಉದ್ಯೋಗಗಳನ್ನು ಕಡಿತಗೊಳಿಸಲಾಗಿದೆ. ಆರ್ಥಿಕ ಒತ್ತಡಗಳು,ಪುನರ್‌ರಚನೆ ಪ್ರಯತ್ನಗಳು ಮತ್ತು ಕೃತಕ ಬುದ್ಧಿಮತ್ತೆ(ಎಐ) ಯುಗದಲ್ಲಿ ಬದಲಾಗುತ್ತಿರುವ ಆದ್ಯತೆಗಳೊಂದಿಗೆ ಹೋರಾಡುತ್ತಿರುವ ಇಂಟೆಲ್,ಮೆಟಾ,ಮೈಕ್ರೋಸಾಫ್ಟ್ ಮತ್ತು ಗೂಗಲ್‌ನಂತಹ ಪ್ರಮುಖ ತಂತ್ರಜ್ಞಾನ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸುವುದನ್ನು ಮುಂದುವರಿಸಿವೆ ಎಂದು indiatoday.in ವರದಿ ಮಾಡಿದೆ.

ಮೈಕ್ರೋಸಾಫ್ಟ್:

ಮೈಕ್ರೋಸಾಫ್ಟ್ ಈ ವರ್ಷದಲ್ಲಿ ಈವರೆಗೆ ತನ್ನ ಕಾರ್ಯಪಡೆಯ ಸುಮಾರು ಶೇ.4ರಷ್ಟು,ಅಂದರೆ 9,100 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು ವಿಶೇಷವಾಗಿ ಅದರ ಎಕ್ಸ್‌ಬಾಕ್ಸ್ ಮತ್ತು ಗೇಮಿಂಗ್ ವಿಭಾಗಗಳ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ. ಕಂಪನಿಯು ‌ವ್ಯೂಹಾತ್ಮಕ ಬೆಳವಣಿಗೆಯ ಮೇಲೆ ಗಮನವನ್ನು ಕೇಂದ್ರೀಕರಿಸಲು ಕೆಲವು ಕ್ಷೇತ್ರಗಳಲ್ಲಿ ಕಾರ್ಯವನ್ನು ನಿಲ್ಲಿಸುತ್ತಿದೆ ಅಥವಾ ಕಡಿಮೆಗೊಳಿಸುತ್ತಿದೆ ಎಂದು ಎಕ್ಸ್‌ಬಾಕ್ಸ್ ಮುಖ್ಯಸ್ಥ ಫಿಲ್ ಸ್ಪೆನ್ಸರ್ ಹೇಳಿದ್ದಾರೆ.

ಮೈಕ್ರೋಸಾಫ್ಟ್ 2023ರಲ್ಲಿ 10,000 ಮತ್ತು 2024ರಲ್ಲಿ 18,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು.

ಇಂಟೆಲ್:

ಇಂಟೆಲ್ ಕೂಡ ಹೊಸ ಸಿಇಒ ಲಿಪ್-ಬು ಟಾನ್ ನೇತೃತ್ವದಲ್ಲಿ ಬೃಹತ್ ಪುನರ‌್ರಚನೆಗೆ ಒಳಗಾಗುತ್ತಿದೆ. ಜುಲೈನಲ್ಲಿ ಅದರ ಸಾಂಟಾ ಕ್ಲಾರಾ ಪ್ರಧಾನ ಕಚೇರಿಯ 107 ಉದ್ಯೋಗಿಗಳು ತಮ್ಮ ಕೆಲಸಗಳನ್ನು ಕಳೆದುಕೊಳ್ಳಲಿದ್ದಾರೆ. ಕಂಪನಿಯು ಜರ್ಮನಿಯಲ್ಲಿನ ತನ್ನ ಆಟೋಮೋಟಿವ್ ಚಿಪ್ ಘಟಕವನ್ನೂ ಮುಚ್ಚುತ್ತಿದ್ದು, ಬಹುತೇಕ ಅಲ್ಲಿಯ ಎಲ್ಲ ಸಿಬ್ಬಂದಿಗಳಿಗೆ ಗೇಟ್ ಪಾಸ್ ನೀಡಲಿದೆ. ಜುಲೈ ಮಧ್ಯದ ವೇಳೆಗೆ ಇನ್ನಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ಯೋಜನೆಯು ಸಿದ್ಧಗೊಂಡಿದ್ದು,ಇಂಟೆಲ್‌ನ ಜಾಗತಿಕ ಕಾರ್ಯಪಡೆಯ ಶೇ.20ರಷ್ಟು ಜನರು ಕೆಲಸ ಕಳೆದುಕೊಳ್ಳಲಿದ್ದಾರೆ.

ಅಮೆಝಾನ್:

ಅಮೆಝಾನ್ ಈ ವರ್ಷ ಈವರೆಗೆ ನಾಲ್ಕು ಸುತ್ತುಗಳ ಉದ್ಯೊಗ ಕಡಿತಗಳನ್ನು ಪೂರ್ಣಗೊಳಿಸಿದೆ. ಅದು ತನ್ನ ಪ್ರಸ್ತುತ ವೆಚ್ಚ ಕಡಿತ ಯೋಜನೆಯ ಭಾಗವಾಗಿ ಜಾಗತಿಕವಾಗಿ ಸುಮಾರು 14,000 ವ್ಯವಸ್ಥಾಪಕ ಹುದ್ದೆಗಳನ್ನು(ಅದರ ನಾಯಕತ್ವ ಸಿಬ್ಬಂದಿಯ ಸುಮಾರು ಶೇ.13ರಷ್ಟು) ಕಡಿತಗೊಳಿಸಲು ಯೋಜಿಸುತ್ತಿದೆ. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಂಪನಿಯಲ್ಲಿ ಒಟ್ಟು ವ್ಯವಸ್ಥಾಪಕರ ಸಂಖ್ಯೆ 92,000ಕ್ಕಿಂತ ಕೆಳಗಿಳಿಯಲಿದೆ.

ಐಬಿಎಂ:

ಐಬಿಎಂ ಪ್ರಮುಖವಾಗಿ ಮಾನವ ಸಂಪನ್ಮೂಲ ವಿಭಾಗದಲ್ಲಿಯ ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಹಿಂದೆ ಜನರು ಮಾಡುತ್ತಿದ್ದ ಹಲವಾರು ಕೆಲಸಗಳನ್ನು ಈಗ ಎಐ ನಿರ್ವಹಿಸುತ್ತಿರುವುದರೊಂದಿಗೆ ಆಟೋಮೇಷನ್‌ಗೆ ಆಂತರಿಕ ಬದಲಾವಣೆಯ ಬಳಿಕ ಕಂಪನಿ ಈ ಕ್ರಮವನ್ನು ತೆಗೆದುಕೊಂಡಿದೆ ಎನ್ನಲಾಗಿದೆ.

ಇನ್ಫೋಸಿಸ್:

ಇನ್ಫೋಸಿಸ್ ತನ್ನ ಆಂತರಿಕ ಮೌಲ್ಯಮಾಪನದಲ್ಲಿ ಉತ್ತೀರ್ಣಗೊಳ್ಳದ 240 ಆರಂಭಿಕ ಹಂತದ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿರುವುದು ವರದಿಯಾಗಿದೆ. ಇದು ಇತ್ತೀಚಿನ ತಿಂಗಳುಗಳಲ್ಲಿ ಇಂತಹ ಎರಡನೇ ಉದ್ಯೋಗ ಕಡಿತವಾಗಿದೆ. 2025 ಫೆಬ್ರವರಿಯಲ್ಲಿ ಅದು 300ಕ್ಕೂ ಅಧಿಕ ಹೊಸಬರನ್ನು ಮನೆಗೆ ಕಳುಹಿಸಿತ್ತು. ಈ ಪೈಕಿ ಹೆಚ್ಚಿನವರು ಕೋವಿಡ್ ಸಮಯದಲ್ಲಿ ತಮ್ಮ ಆಫರ್ ಲೆಟರ್‌ಗಳನ್ನು ಪಡೆದಿದ್ದು,ಎರಡು ವರ್ಷಗಳಿಗೂ ಅಧಿಕ ಸಮಯದಿಂದ ಕಂಪನಿಯ ಕರೆಗಾಗಿ ಕಾಯುತ್ತಿದ್ದರು. ಕೊನೆಗೂ 2024ರ ಕೊನೆಯಲ್ಲಿ ಕಂಪನಿಗೆ ಸೇರ್ಪಡೆಗೊಂಡಿದ್ದರು.

ಇತರ ಕಂಪನಿಗಳು:

ಮೆಟಾ ಈ ವರ್ಷ ಇಲ್ಲಿಯವರೆಗೆ ಸುಮಾರು 3,700 ಉದ್ಯೋಗಿಗಳನ್ನು ತೆಗೆದುಹಾಕಿದೆ. ಅತ್ತ ಗೂಗಲ್ ಕೂಡ ತನ್ನ ಸಿಬ್ಬಂದಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿದೆ.

ಉದ್ಯೋಗ ಕಡಿತ ಪ್ರಮುಖ ತಂತ್ರಜ್ಞಾನ ಕಂಪನಿಗಳಿಗಷ್ಟೇ ಸೀಮಿತವಾಗಿಲ್ಲ. ವರ್ಡ್‌ಪ್ರೆಸ್ ನಡೆಸುತ್ತಿರುವ ಆಟೊಮ್ಯಾಟಿಕ್, ಟಿಕ್‌ಟಾಕ್,ಓಲಾ ಎಲೆಕ್ಟ್ರಿಕ್,ಎಚ್‌ಪಿ,ಸೇಲ್ಸ್‌ಫೋರ್ಸ್, ಬ್ಲ್ಯೂಒರಿಜಿನ್,ಕ್ಯಾನ್ವಾ,ಇಲೆಕ್ಟ್ರಾನಿಕ್ ಆರ್ಟ್ಸ್,ಸೀಮೆನ್ಸ್,ಮ್ಯಾಚ್ ಗ್ರೂಪ್,ಕ್ರೌಡ್‌ಸ್ಟ್ರೈಕ್ ಇತ್ಯಾದಿಗಳೂ ಉದ್ಯೋಗಿಗಳನ್ನು ವಜಾಗೊಳಿಸಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X