ಎರಡು ಮತದಾರರ ಗುರುತಿನ ಚೀಟಿ ಹೊಂದಿರುವುದಕ್ಕೆ ತೇಜಸ್ವಿ ಯಾದವ್ ಗೆ ಚುನಾವಣಾ ಆಯೋಗದಿಂದ ನೋಟಿಸ್

ತೇಜಸ್ವಿ ಯಾದವ್ | PTI
ಪಟ್ನಾ: ಎರಡು ಮತದಾರರ ಗುರುತಿನ ಚೀಟಿ (EPIC) ಹೊಂದಿರುವುದಕ್ಕಾಗಿ ಆರ್ಜೆಡಿ ನಾಯಕ ಹಾಗೂ ಬಿಹಾರ ವಿಧಾನಸಭಾ ವಿಪಕ್ಷ ನಾಯಕ ತೇಜಸ್ವಿ ಯಾದವ್ ಅವರಿಗೆ ರವಿವಾರ ಚುನಾವಣಾ ಆಯೋಗ ನೋಟಿಸ್ ಜಾರಿಗೊಳಿಸಿದೆ.
“ಎರಡು ಮತದಾರರ ಗುರುತಿನ ಚೀಟಿ ಹೊಂದಿರುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಇದು ಅಪರಾಧ” ಎಂದು ಇದಕ್ಕೂ ಮುನ್ನ ಬಿಜೆಪಿ ಖಂಡಿಸಿತ್ತು. ಇದರ ಬೆನ್ನಲ್ಲೇ ಚುನಾವಣಾ ಆಯೋಗವು ತೇಜಸ್ವಿ ಯಾದವ್ ಗೆ ನೋಟಿಸ್ ಜಾರಿಗೊಳಿಸಿದೆ. ತೇಜಸ್ವಿ ಯಾದವ್ ಅವರು ದಿಘಾ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ.
“ಆಗಸ್ಟ್ 2ರಂದು ಸುದ್ದಿಗೋಷ್ಠಿ ನಡೆಸಿದ್ದ ನೀವು, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ ಎಂದು ಆರೋಪಿಸಿದ್ದಿರಿ. ನಿಮ್ಮ ಎಪಿಕ್ ಸಂಖ್ಯೆಯನ್ನೂ (ಆರ್ಎಬಿ 2916120) ಉಲ್ಲೇಖಿಸಿದ್ದಿರಿ. ತನಿಖೆಯ ನಂತರ, ಈ ಸಂಖ್ಯೆಯ ಎಪಿಕ್ ಅನ್ನು ಚುನಾವಣಾ ಆಯೋಗ ವಿತರಿಸಿಯೇ ಇಲ್ಲ ಎಂಬುದು ತಿಳಿದು ಬಂದಿದೆ” ಎಂದು ಈ ನೋಟಿಸ್ ನಲ್ಲಿ ಹೇಳಲಾಗಿದೆ.
Next Story





