ತೆಲಂಗಾಣ ಸುರಂಗ ಕುಸಿತ | ನಾಲ್ವರು ಕಾರ್ಮಿಕರು ಸಿಲುಕಿರುವ ಸ್ಥಳ ಪತ್ತೆ

PC ; PTI
ನಾಗರ್ಕರ್ನೂಲ್ : ತೆಲಂಗಾಣದ ಶ್ರೀಶೈಲಂ ಎಡದಂಡೆಯ ಸುರಂಗ ಕುಸಿದು ಅದರಡಿ ಸಿಲುಕಿರುವ 8 ಕಾರ್ಮಿಕರ ಪೈಕಿ ನಾಲ್ವರಿರುವ ಸ್ಥಳವನ್ನು ರಾಡಾರ್ ಮೂಲಕ ಪತ್ತೆಹಚ್ಚಲಾಗಿದೆ ಎಂದು ರಾಜ್ಯ ಅಬಕಾರಿ ಸಚಿವ ಕೃಷ್ಣ ರಾವ್ ಶನಿವಾರ ಹೇಳಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪತ್ತೆಯಾಗಿರುವ ನಾಲ್ವರನ್ನು ರವಿವಾರ ಸಂಜೆಯೊಳಗೆ ಹೊರತರುವ ಪ್ರಯತ್ನ ಮಾಡಲಾಗುವುದು. ನಾನು ಮೊದಲೇ ಹೇಳಿರುವ ಹಾಗೆ ಅವರು ಬದುಕಿರುವ ಸಾಧ್ಯತೆ ಅತ್ಯಂತ ಕಡಿಮೆ ಎಂದು ಅವರು ಅಭಿಪ್ರಾಯಪಟ್ಟರು.
‘ಇನ್ನುಳಿದ ಉಳಿದ ನಾಲ್ವರು ಟನಲ್ ಬೋರಿಂಗ್ ಯಂತ್ರದ(ಟಿಬಿಎಂ) ಅಡಿಯಲ್ಲಿ ಸಿಲುಕಿರುವ ಸಾಧ್ಯೆತೆಯಿದೆ. ಸುಮಾರು 11 ಬೇರೆ ಬೇರೆ ರಕ್ಷಣಾ ತಂಡಗಳ ಸಿಬ್ಬಂದಿ ಸಮರೋಪಾದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕೆಸರು ಮತ್ತು ಮಣ್ಣಿನಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಕಾರ್ಮಿಕರನ್ನು ಹೊರಗೆ ತರಲು 450 ಅಡಿ ಎತ್ತರದ ಟಿಬಿಎಂ ಅನ್ನು ಕತ್ತರಿಸಲಾಗುತ್ತಿದೆ’ ಎಂದರು.
Next Story





