ತೆಲಂಗಾಣ : ಕಾಂಗ್ರೆಸ್ ಅಭ್ಯರ್ಥಿ ಅಝರುದ್ದೀನ್ ಕ್ಷೇತ್ರದಲ್ಲಿ ಮತ ಎಣಿಕೆ ಸ್ಥಗಿತ
ಸಾಂದರ್ಭಿಕ ಚಿತ್ರ (PTI)
ಹೈದರಾಬಾದ್ : ಇವಿಎಂನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಇಲ್ಲಿನ ಜುಬ್ಲಿಹಿಲ್ಸ್ ಕ್ಷೇತ್ರದ ಮತ ಎಣಿಕೆ ಸ್ಥಗಿತಗೊಳಿಸಲಾಗಿದೆ. 11 ಸುತ್ತಿನ ಮತ ಎಣಿಕೆ ನಂತರ ಈ ಬೆಳವಣಿಗೆ ನಡೆದಿದೆ. ಜುಬ್ಲಿಹಿಲ್ಸ್ ಜಿದ್ದಾಜಿದ್ದಿನ ಕಣವಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಮುಹಮ್ಮದ್ ಅಝರುದ್ದೀನ್ ವಿಧಾನ ಸಭೆಗೆ ಆಯ್ಕೆ ಬಯಸಿದ್ದಾರೆ. 26 ಸುತ್ತಿನ ಮತ ಎಣಿಕೆಯ 11 ನೇ ಸುತ್ತು ಈಗಾಗಲೇ ಮುಗಿದಿದ್ದು, ಬಿಆರ್ಎಸ್ ಪಕ್ಷದ ಮಾಗಂಟಿ ಗೋಪಿನಾಥ್ 31582 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.
Next Story