Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ತೆಲಂಗಾಣ ಪೊಲೀಸರಿಂದ ಗುಜರಾತ್‌ ನ 20...

ತೆಲಂಗಾಣ ಪೊಲೀಸರಿಂದ ಗುಜರಾತ್‌ ನ 20 ಸೈಬರ್ ವಂಚಕರ ಬಂಧನ

615 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು!

ವಾರ್ತಾಭಾರತಿವಾರ್ತಾಭಾರತಿ13 May 2025 8:54 PM IST
share
ತೆಲಂಗಾಣ ಪೊಲೀಸರಿಂದ ಗುಜರಾತ್‌ ನ 20 ಸೈಬರ್ ವಂಚಕರ ಬಂಧನ

ಹೈದರಾಬಾದ್: ಸೈಬರ್ ಅಪರಾಧದ ಮೇಲೆ ಮಹತ್ವದ ದಾಳಿ ನಡೆಸಿರುವ ತೆಲಂಗಾಣ ಸೈಬರ್ ಸುರಕ್ಷತಾ ದಳವು, ತನ್ನ ಯಶಸ್ವಿ ವಿಶೇಷ ಅಂತಾರಾಜ್ಯ ಕಾರ್ಯಾಚರಣೆಯಲ್ಲಿ ತೆಲಂಗಾಣದಲ್ಲಿ 60 ಸೈಬರ್ ಅಪರಾಧ ಪ್ರಕರಣಗಳು ಸೇರಿದಂತೆ ದೇಶಾದ್ಯಂತ ಬೃಹತ್ ಪ್ರಮಾಣದ 615 ಪ್ರಕರಣಗಳಲ್ಲಿ ಭಾಗಿಯಾಗಿದ್ದ 20 ಮಂದಿ ಸೈಬರ್ ವಂಚಕರನ್ನು ಗುಜರಾತ್‌ನ ಸೂರತ್‌ನಿಂದ ಬಂಧಿಸಿದೆ.

10 ದಿನಗಳ ಕಾಲ ಸೂರತ್‌ನಲ್ಲೇ ಠಿಕಾಣಿಯೂರಿದ್ದ ಈ ಸೈಬರ್ ವಂಚನೆ ಪ್ರಕರಣಗಳ ತನಿಖೆಗೆಂದೇ ರಚಿಸಲಾಗಿದ್ದ ತೆಲಂಗಾಣ ಸೈಬರ್ ಅಪರಾಧ ಸುರಕ್ಷತಾ ದಳದ ತಂಡಗಳು, ಸೈಬರ್ ಅಪರಾಧದೆಡೆಗಿನ ಶೂನ್ಯ ಸಹಿಷ್ಣುತೆ ನೀತಿಯಡಿ ಈ ಕಾರ್ಯಾಚರಣೆಯನ್ನು ಅನುಷ್ಠಾನಗೊಳಿಸಿದವು. ತೆಲಂಗಾಣ ಸೈಬರ್ ಅಪರಾಧ ಸುರಕ್ಷತಾ ದಳದ ಕಾರ್ಯಾಚರಣೆ ಘಟಕವು ಸೈಬರ್ ಅಪರಾಧಿಗಳನ್ನು ಸೆರೆ ಹಿಡಿದಿರುವ ಐದನೆಯ ಮಹತ್ವದ ಕಾರ್ಯಾಚರಣೆ ಇದಾಗಿದೆ ಎಂದು ತೆಲಂಗಾಣ ಸೈಬರ್ ಅಪರಾಧ ಸುರಕ್ಷತಾ ದಳದ ನಿರ್ದೇಶಕಿ ಶಿಖಾ ಗೋಯೆಲ್ ತಿಳಿಸಿದ್ದಾರೆ.

ಅಂತಾರಾಜ್ಯ ಸೈಬರ್ ಅಪರಾಧ ತನಿಖೆಗಳಿಗೆ ಕೇಂದ್ರೀಕೃತ ದತ್ತಾಂಶ ಚಾಲಿತ ಹಾಗೂ ವ್ಯೂಹಾತ್ಮಕ ಧೋರಣೆಯನ್ನು ಜಾರಿಗೊಳಿಸಲು ಸ್ಥಾಪಿಸಲಾಗಿರುವ ಕಾರ್ಯಾಚರಣೆ ಘಟಕವು ತೆಲಂಗಾಣದಿಂದ ವರದಿಯಾಗಿದ್ದ ಏಳು ಸಿಸಿಪಿಎಸ್ ಪ್ರಕರಣಗಳತ್ತ ತನ್ನ ಗಮನ ಕೇಂದ್ರೀಕರಿಸಿತ್ತು. ಈ ಪ್ರಕರಣಗಳು ಚೆಕ್ ಮೂಲಕ ಮಾಡಲಾಗಿರುವ ವಹಿವಾಟುಗಳು ಒಳಗೊಂಡಿದ್ದವು.

ಇದರ ಫಲವಾಗಿ, ತೆಲಂಗಾಣ ಸೈಬರ್ ಅಪರಾಧ ಸುರಕ್ಷತಾ ದಳದ ಕಾರ್ಯಾಚರಣೆ ಘಟಕದ ತಂಡಗಳು 14 ಮಂದಿ ನಿಷ್ಕ್ರೀಯ ಬ್ಯಾಂಕ್ ಖಾತೆದಾರರು ಹಾಗೂ ಆರು ಏಜೆಂಟ್‌ಗಳನ್ನು ಬಂಧಿಸಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ಈ ಆರೋಪಿಗಳು 4.37 ಕೋಟಿ ಮೊತ್ತದ ಸಂಶಯಾಸ್ಪದ ವಹಿವಾಟುಗಳನ್ನು 27 ನಿಷ್ಕ್ರೀಯ ಬ್ಯಾಂಕ್ ಖಾತೆಗಳ ಮೂಲಕ ನಿರ್ವಹಿಸಿರುವುದು ಬೆಳಕಿಗೆ ಬಂದಿದೆ. ತೆಲಂಗಾಣ ಒಂದರಲ್ಲೇ ಐವರು ಆರೋಪಿಗಳು ಚೆಕ್‌ಗಳ ಮೂಲಕ 22,64,500 ರೂ. ಅನ್ನು ಈ ಖಾತೆಗಳಿಂದ ಹಿಂಪಡೆದಿರುವುದೂ ಬಯಲಾಗಿದೆ.

ಈ ಆರೋಪಿಗಳಲ್ಲಿ ಖಾಸಗಿ ಉದ್ಯೋಗಿಗಳು, ಉದ್ಯಮಿಗಳು ಹಾಗೂ ಡಿಸಿಬಿ ಬ್ಯಾಂಕ್‌ ನ ವಾಪಿ ಶಾಖೆಯ ಓರ್ವ ವ್ಯವಸ್ಥಾಪಕ ಸೇರಿದ್ದಾರೆ. ಈ ಆರೋಪಿಗಳು ವ್ಯಾಪಾರ ಹಾಗೂ ಅರೆಕಾಲಿಕ ಉದ್ಯೋಗ ವಂಚನೆಗಳು ಸೇರಿದಂತೆ ಹಲವು ಸೈಬರ್ ವಂಚನೆಗಳಲ್ಲಿ ಭಾಗಿಯಾಗಿದ್ದಾರೆ.

ಈ ಆರೋಪಿಗಳನ್ನು ವರ್ಗಾವಣೆ ವಾರಂಟ್ ಅಡಿ ತೆಲಂಗಾಣಕ್ಕೆ ಕರೆತರಲಾಗಿದ್ದು, ಸದ್ಯ ರಾಜ್ಯಾದ್ಯಂತ ಇರುವ ವಿವಿಧ ಜೈಲುಗಳಲ್ಲಿರಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನೂ ಹಲವು ಶಂಕಿತ ಆರೋಪಿಗಳನ್ನು ಸೆರೆ ಹಿಡಿಯಲು ತನಿಖೆ ಪ್ರಗತಿಯಲ್ಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X