ತೆಲಂಗಾಣ: ಹಿಂಸೆಗೆ ತಿರುಗಿದ ಎಥೆನಾಲ್ ಕಂಪೆನಿಯ ವಿರುದ್ಧದ ಗ್ರಾಮಸ್ಥರ ಪ್ರತಿಭಟನೆ, ಪೊಲೀಸ್ ವಾಹನಕ್ಕೆ ಬೆಂಕಿ

File Photo
ಹೈದರಾಬಾದ್,ಅ.22; ತೆಲಂಗಾಣ ಜಿಲ್ಲೆಯ ನಾರಾಯಣ ಪೇಟೆಯಲ್ಲಿ ಎಥೆನಾಲ್ ಕಂಪೆನಿಯ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ ರವಿವಾರ ಹಿಂಸೆಗೆ ತಿರುಗಿದ್ದು, ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ಉದ್ರಿಕ್ತ ಪ್ರತಿಭಟನಾಕಾರರ ಗುಂಪೊಂದು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದೆ.
ಚಿತ್ತನೂರ್ ಗ್ರಾಮದಲ್ಲಿ ಎಥೆನಾಲ್ ಕಾರ್ಖಾನೆಯ ಟ್ಯಾಂಕರೊಂದನ್ನು ತಡೆಹಿಡಿದ ಗ್ರಾಮಸ್ಥರು, ರಸ್ತೆಯಲ್ಲಿ ಧರಣಿ ನಡೆಸಿದರು. ತಮ್ಮ ಗ್ರಾಮದಲ್ಲಿ ಪಕ್ಕದಲ್ಲೇ ಇರುವ ಎಥೆನಾಲ್ ಕಾರ್ಖಾನೆಯು ವಿಸರ್ಜಿಸಿದ ಮಾಲಿನ್ಯಕಾರಕಗಳನ್ನು ಈ ಟ್ಯಾಂಕರ್ ಒಯ್ದು, ತಮ್ಮ ಪ್ರದೇಶದಲ್ಲೇ ಎಸೆಯುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆಗಿಳಿದಿದ್ದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದ್ದರು. ಅಧಿಕಾರಿಗಳ ತಂಡವೊಂದು ಈ ವಿಷಯವಾಗಿ ಪರಿಶೀಲನೆ ನಡೆಸಲಿದೆ ಎಂದು ಅವರು ಭರವಸೆ ನೀಡಿದ್ದರು
ಆದರೆ ಈ ಸಂದರ್ಭದಲ್ಲಿ ಕೆಲವರು ಅಧಿಕಾರಿಗಳ ಮೇಲೆ ಕಲ್ಲುತೂರಾಟ ನಡೆಸಿದ್ದರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂದರ್ಭ ಪ್ರತಿಭಟನಕಕಾರರೆನ್ನಲಾದವರ ಗುಂಪೊಂದು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿತು ಹಾಗೂ ಇನ್ನೊಂದು ವಾಹನಕ್ಕೆ ಹಾನಿಯೆಸಗಿತು. ಆಗ ಪ್ರತಿಭಟನಾನಿರತ ಗ್ರಾಮಸ್ಥರನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದರು.
ಕಿಡಿಗೇಡಿಗಳ ಕಲ್ಲುತೂರಾಟದಿಂದ ವೃತ್ತ ನಿರೀಕ್ಷಕ ಹಾಗೂ ಇನ್ನೋರ್ವ ಸಬ್ ಇನ್ಸ್ಪೆಕ್ಟರ್ ಅವರಿಗೆ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆಯನ್ನು ಆಧರಿಸಿ ಸೂಕ್ತ ಕಾನೂನುಕ್ರಮವನ್ನು ಕೈಗೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಮೊದಲು ಚಿತನೂರ್ನ ಗ್ರಾಮಸ್ಥರು ಎಥೆನಾಲ್ ಕಾರ್ಖಾನೆಯ ಥಾಪನೆಯನ ವಿಉದಧವೂ ಪ್ರತಿಭಟನೆ ನಡೆಸಿದ್ದರು.







