ಟೆಕ್ಸಾಸ್ ರಾಸಾಯನಿಕ ಘಟಕ ಯೋಜನೆ | 50 ದಶಲಕ್ಷ ಡಾಲರ್ ಹೂಡಿಕೆ ಮಾಡಲಿರುವ ಉದ್ಯಮಿ ಬಿರ್ಲಾ: ವರದಿ

ಕುಮಾರ ಮಂಗಲಂ ಬಿರ್ಲಾ
ವಾಷಿಂಗ್ಟನ್: ಅಮೆರಿಕದ ತೈಲ ಸಂಸ್ಕರಣಾ ಪ್ರದೇಶವಾದ ಟೆಕ್ಸಾಸ್ನಲ್ಲಿ ರಾಸಾಯನಿಕ ಘಟಕ ಯೋಜನೆಯಲ್ಲಿ ಭಾರತದ ಉದ್ಯಮಿ ಕುಮಾರ ಮಂಗಲಂ ಬಿರ್ಲಾ 50 ದಶಲಕ್ಷ ಡಾಲರ್ ಹೂಡಿಕೆ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಅಮೆರಿಕಾದಲ್ಲಿ ತನ್ನ ಹೆಜ್ಜೆಗುರುತನ್ನು ಮೂಡಿಸಲು ಆದಿತ್ಯ ಬಿರ್ಲಾ ಸಮೂಹ ಯೋಜಿಸಿದೆ. ಟೆಕ್ಸಾಸ್ನ ಬ್ಯೂಮೌಂಟ್ನಲ್ಲಿ 35 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸ್ಥಾವರ ನಿರ್ಮಿಸುವ ಯೋಜನೆಯಿದೆ. ಇದು ಸಂಶೋಧನೆ ಮತ್ತು ಅಭಿವೃದ್ಧಿ ವ್ಯವಸ್ಥೆಯನ್ನು ಹೊಂದಿರುತ್ತದೆ ಮತ್ತು ಎಪಾಕ್ಸಿ ರೆಸೀನ್ಗಳನ್ನು ಉತ್ಪಾದಿಸಲಿದೆ ಎಂದು ವರದಿಯಾಗಿದೆ.
ಅಮೆರಿಕದಲ್ಲಿ 15 ಶತಕೋಟಿ ಡಾಲರ್ ಗೂ ಅಧಿಕ ಆಸ್ತಿಗಳನ್ನು ಹೊಂದಿರುವ ಆದಿತ್ಯ ಬಿರ್ಲಾ ಅಮೆರಿಕದಲ್ಲಿ ಗರಿಷ್ಠ ಹೂಡಿಕೆ ಮಾಡಿರುವ ಭಾರತೀಯ ಉದ್ಯಮಿ ಎನಿಸಿಕೊಂಡಿದ್ದಾರೆ.
Next Story





