ತಾಂತ್ರಿಕ ದೋಷ: ಬ್ಯಾಂಕಾಕ್-ಕೋಲ್ಕತಾ ‘ಥಾಯ್ ಲಯನ್’ ವಿಮಾನ ಸಂಚಾರ ರದ್ದು

Photo: AFP/file
ಕೋಲ್ಕತ್ತಾ: ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಕೋಲ್ಕತಾ-ಬ್ಯಾಂಕಾಕ್ ‘ಥಾಯ್ ಲಯನ್’ ವಿಮಾನ ಸಂಚಾರವನ್ನು ಶನಿವಾರ ರದ್ದುಗೊಳಿಸಲಾಯಿತು. ವಿಮಾನದಲ್ಲಿದ್ದ ಎಲ್ಲಾ 130 ಪ್ರಯಾಣಿಕರನ್ನು ಕೆಳಗಿಳಿಸಲಾಯಿತು ಹಾಗೂ ಅವರನ್ನು ಹೊಟೇಲ್ ಗೆ ಕರೆದುಕೊಂಡು ಹೋಗಲಾಯಿತು.
ಎನ್ಎಸ್ಸಿಬಿಐ ವಿಮಾನ ನಿಲ್ದಾಣದ ಎಎಐ ಅಧಿಕಾರಿಗಳ ಪ್ರಕಾರ, ವಿಮಾನ ಶನಿವಾರ ಮುಂಜಾನೆ 2.35ಕ್ಕೆ ಕೋಲ್ಕತ್ತಾದಿಂದ ಸಂಚಾರ ಆರಂಭಿಸಬೇಕಿತ್ತು.
ವಿಮಾನ ನಿಗದಿತ ಸಮಯದಲ್ಲಿ ಟ್ಯಾಕ್ಸಿವೇಯಿಂದ ರನ್ವೇ ಕಡೆ ಸಂಚರಿಸಲು ಆರಂಭಿಸಿದೆ. ಆದರೆ, ಅದು ರನ್ವೇಗೆ ಹೋಗುವ ದಾರಿಯಲ್ಲಿ ಇದ್ದಕ್ಕಿದ್ದಂತೆ ನಿಂತಿತು. ವಿಮಾನದ ಫ್ಲಾಪ್ ಸರಿಯಾಗಿ ಕಾರ್ಯ ನಿರ್ವಹಿಸಲಿಲ್ಲ ಎಂದು ವರದಿಯಾಗಿದೆ.
Next Story