ಥಾಣೆ: ಶುಲ್ಕ ಹೆಚ್ಚಳ ವಿಚಾರವಾಗಿ ಖಾಸಗಿ ಶಾಲೆಯಲ್ಲಿ ದಾಂಧಲೆ ಆರೋಪ: ಎಂ ಎನ್ ಎಸ್ ನ 10 ಕಾರ್ಯಕರ್ತರ ಬಂಧನ

ಥಾಣೆ: ಶುಲ್ಕ ಹೆಚ್ಚಳದ ವಿಷಯವಾಗಿ ರಾಜ್ಯದ ಥಾಣೆ ಜಿಲ್ಲೆಯ ಉಲ್ಲಾಸ್ ನಗರದ ಖಾಸಗಿ ಶಾಲೆಯೊಂದಕ್ಕೆ ನುಗ್ಗಿ ದಾಂಧಲೆ ನಡೆಸಿದ ಆರೋಪದ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂ ಎನ್ ಎಸ್) ಕನಿಷ್ಠ 10 ಕಾರ್ಯಕರ್ತರನ್ನು ಬುಧವಾರ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರ ವಿರುದ್ಧ ಹಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
‘’ಶಾಲಾ ಶುಲ್ಕ ಕಡಿತಕ್ಕೆ ಆಗ್ರಹಿಸಿ ಎಂಎನ್ ಎಸ್ ಕಾರ್ಯಕರ್ತರು ಶಾಲಾ ಆವರಣಕ್ಕೆ ನುಗ್ಗಿ ಕಿಟಕಿ ಗಾಜುಗಳು ಹಾಗೂ ಇತರ ವಸ್ತುಗಳನ್ನು ಒಡೆದು ಹಾಕಿ, ಶಾಲೆಯ ನಾಮಫಲಕಕ್ಕೆ ಬಣ್ಣ ಬಳಿದಿದ್ದಾರೆ.
ವಿಷಯ ತಿಳಿದ ಪೊಲೀಸ್ ತಂಡವು ಶಾಲೆಗೆ ಧಾವಿಸಿ ಕಾರ್ಯಕರ್ತರುಗಳನ್ನು ಬಂಧಿಸಿದರು. ಕಾರ್ಯಕರ್ತರು ಶಾಲಾ ಶುಲ್ಕವನ್ನು ಕಡಿತಗೊಳಿಸುವಂತೆ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಎಂಎನ್ ಎಸ್ ನಗರ ಘಟಕದ ಅಧ್ಯಕ್ಷ ಸಚಿನ್ ಕದಮ್ ಬಂಧಿತರಲ್ಲಿ ಸೇರಿದ್ದಾರೆ ಎಂದು ಹಿಲ್ ಲೈನ್ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ರಂಜಿತ್ ಡೇರೆ ತಿಳಿಸಿದ್ದಾರೆ.
Next Story





