ಕರ್ತವ್ಯ ಭವನದಲ್ಲಿ ಸಿದ್ಧಪಡಿಸಿದ ಮೊದಲ ಬಜೆಟ್, 3 ಕರ್ತವ್ಯಗಳು ಸ್ಪೂರ್ತಿ: ಸಚಿವೆ ನಿರ್ಮಲಾ ಸೀತಾರಾಮನ್

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Photo: PTI)
ಹೊಸದಿಲ್ಲಿ: 2026ರ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ಗೆ ಸ್ಫೂರ್ತಿ ನೀಡಿದ 3 'ಕರ್ತವ್ಯಗಳʼ ಬಗ್ಗೆ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
2026ರ ಕೇಂದ್ರ ಬಜೆಟ್ ಕರ್ತವ್ಯ ಭವನದಲ್ಲಿ ಸಿದ್ಧಪಡಿಸಿದ ಮೊದಲ ಬಜೆಟ್ ಆಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದು ಮೂರು ಕರ್ತವ್ಯಗಳನ್ನು ಪ್ರೇರೇಪಿಸಿದೆ. ಮೊದಲ ಕರ್ತವ್ಯ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದು ಮತ್ತು ನಿರಂತರಗೊಳಿಸವುದಾಗಿದೆ. ನಮ್ಮ ಎರಡನೇ ಕರ್ತವ್ಯ ನಮ್ಮ ಜನರ ಆಕಾಂಕ್ಷೆಗಳನ್ನು ಪೂರೈಸುವುದು ಮತ್ತು ಅವರ ಸಾಮರ್ಥ್ಯವನ್ನು ಬಲಗೊಳಿಸುವುದು. ನಮ್ಮ ಮೂರನೇ ಕರ್ತವ್ಯ ಎಲ್ಲರಿಗೂ ಸಂಪನ್ಮೂಲಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Next Story





