ತಂದೆಯ ಹತ್ಯೆಯಲ್ಲಿ ಭಾರತ ಸರಕಾರದ ಪಾತ್ರದ ಬಗ್ಗೆ ಕುಟುಂಬಕ್ಕೆ ಅನುಮಾನವಿದೆ ; ಹರ್ದೀಪ್ ಸಿಂಗ್ ನಿಜ್ಜಾರ್ ಪುತ್ರ

ಹರ್ದೀಪ್ ಸಿಂಗ್ | Photo: NDTV
ಹೊಸದಿಲ್ಲಿ: ತನ್ನ ತಂದೆಯ ಹತ್ಯೆಯಲ್ಲಿ ಭಾರತ ಸರಕಾರದ ಏಜೆಂಟ್ ಭಾಗಿಯಾಗಿರುವುದಾಗಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ಬಳಿಕ ತನಗೆ ಸಮಾಧಾನವಾಗಿದೆ ಎಂದು ಖಾಲಿಸ್ತಾನದ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ನ ಪುತ್ರ ಹೇಳಿದ್ದಾರೆ.
ಜೂನ್ 18ರಂದು ಸರ್ರೇಯಲ್ಲಿರುವ ಗುರುನಾನಕ್ ಸಿಕ್ಖ್ ಗುರುದ್ವಾರದಲ್ಲಿ ಸಂಜೆಯ ಪ್ರಾರ್ಥನೆಯ ಬಳಿಕ ತನ್ನ ತಂದೆ ಹರ್ದೀಪ್ ಸಿಂಗ್ ಗುಂಡಿನ ದಾಳಿಯಲ್ಲಿ ಹತ್ಯೆಯಾದ ಬಳಿಕ ಆತನ ಪುತ್ರ ಬಾಲರಾಜ್ ಸಿಂಗ್ ನಿಜ್ಜಾರ್ ಮೊದಲ ಬಾರಿ ಸಾರ್ವಜನಿಕವಾಗಿ ಮಾತನಾಡಿದ್ದಾರೆ.
ಭಾರತ ಸರಕಾರದ ಏಜೆಂಟ್ ಹಾಗೂ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ನಡುವೆ ಸಂಭಾವ್ಯ ನಂಟಿನ ಪ್ರಬಲ ಆರೋಪಗಳಿವೆ ಎಂದು ಕೆನಡಾದ ಪ್ರಧಾನಿ ಸೋಮವಾರ ತಿಳಿಸಿದ್ದರು. ಕೆನಡಾದ ಪ್ರಧಾನಿ ಅವರ ಹೇಳಿಕೆ ಕೊನೆಗೂ ಈ ಪ್ರಕರಣವನ್ನು ಸಾರ್ವಜನಿಕರ ಮುಂದೆ ತಂದಿದೆ ಎಂದು ಬಾಲಾಜಿ ಅವರು ಹೇಳಿದ್ದಾರೆ.
ಹೌಸ್ ಆಫ್ ಕಾಮನ್ ನಲ್ಲಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯನ್ನು ಖಂಡಿಸಿದ ಟ್ರುಡೊ, ಹಾಗೂ ಎನ್ಡಿಪಿ ನಾಯಕ ಜಗ್ಮೀತ್ ಸಿಂಗ್ ಅವರಿಗೆ ಬಾಲಾಜಿ ವಂದನೆ ಸಲ್ಲಿಸಿದ್ದಾರೆ.