ಲ್ಯಾಪ್ ಟಾಪ್ ಗಳು, ಕಂಪ್ಯೂಟರ್ ಗಳ ಆಮದು ನಿರ್ಬಂಧದ ಆದೇಶ ಅನುಷ್ಠಾನ ಅಕ್ಟೋಬರ್ 31 ರವರೆಗೆ ಮುಂದೂಡಿದ ಸರಕಾರ

ಹೊಸದಿಲ್ಲಿ: ಲ್ಯಾಪ್ ಟಾಪ್ ಗಳು, ಟ್ಯಾಬ್ಲೆಟ್ ಗಳು ಹಾಗೂ ವೈಯಕ್ತಿಕ ಕಂಪ್ಯೂಟರ್ ಗಳ ಮೇಲಿನ ಆಮದು ನಿರ್ಬಂಧದ ಆದೇಶದ ಅನುಷ್ಠಾನವನ್ನು ಕೇಂದ್ರ ಸರಕಾರ ಶುಕ್ರವಾರ ಅಕ್ಟೋಬರ್ 31 ರವರೆಗೆ ಮುಂದೂಡಿದೆ.
ನವೆಂಬರ್ 1 ರಿಂದ, ಸರಕಾರದಿಂದ ಪರವಾನಗಿ ಪಡೆದ ನಂತರವೇ ಈ ಸಾಧನಗಳ ದೊಡ್ಡ ಪ್ರಮಾಣದ ಆಮದುಗಳನ್ನು ಅನುಮತಿಸಲಾಗುತ್ತದೆ.
ಆಮದುಗಳ ಮೇಲಿನ ನಿರ್ಬಂಧಗಳನ್ನು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯವು ಗುರುವಾರ ವಿಧಿಸಿತ್ತು.
ಪರವಾನಗಿ ಪಡೆದ ನಂತರವೇ ಈ ವಸ್ತುಗಳ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆದಾಗ್ಯೂ, ಬ್ಯಾಗೇಜ್ ನಿಯಮಗಳ ಅಡಿಯಲ್ಲಿ ಯಾವುದೇ ನಿರ್ಬಂಧವಿಲ್ಲ, ಇದು ಕೊರಿಯರ್ ಅಥವಾ ಪೋಸ್ಟ್ ಮೂಲಕ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸೀಮಿತ ಸಂಖ್ಯೆಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಆದರೆ, ಶುಕ್ರವಾರ ತಡರಾತ್ರಿ ಸರಕಾರವು ತನ್ನ ನಿರ್ಧಾರವನ್ನು ಮೂರು ತಿಂಗಳು ಮುಂದೂಡಲು ನಿರ್ಧರಿಸಿತು. ನಿರ್ಬಂಧಗಳನ್ನು ಮುಂದೂಡುವ ಕ್ರಮವು "ಉದಾರವಾದ ಪರಿವರ್ತನೆಯ ವ್ಯವಸ್ಥೆ" ಎಂದು ಸರಕಾರ ಹೇಳಿದೆ. ಈ ಹೆಜ್ಜೆಯು ಎಲೆಕ್ಟ್ರಾನಿಕ್ ಕಂಪೆನಿಗಳಿಗೆ ನಿಟ್ಟುಸಿರುವ ಬಿಡುವಂತೆ ಮಾಡಿದೆ.







