ಪ್ರಧಾನಿ ಭದ್ರತೆಗಾಗಿ ರಾತ್ರಿ ರಸ್ತೆಗೆ ಅಡ್ಡವಾಗಿ ಹಗ್ಗ ಕಟ್ಟಿದ ಪೊಲೀಸರು | ಬೈಕ್ ಸವಾರ ದಾರುಣ ಸಾವು

ಸಾಂದರ್ಭಿಕ ಚಿತ್ರ
ಕೊಚ್ಚಿ: ಪ್ರಧಾನಿ ನರೇಂದ್ರ ಮೋದಿಯ ಭೇಟಿಯ ಸಂದರ್ಭದಲ್ಲಿ ಭದ್ರತೆಗಾಗಿ ರಸ್ತೆಗೆ ಅಡ್ಡಲಾಗಿ ಕಟ್ಟಲಾಗಿದ್ದ ಹಗ್ಗಕ್ಕಿ ಸಿಲುಕಿ ಮೋಟರ್ಸೈಕಲ್ ಸವಾರರೊಬ್ಬರು ಮೃತಪಟ್ಟ ದುರಂತ ಘಟನೆ ಕೇರಳದ ಕೊಚ್ಚಿಯಲ್ಲಿ ರವಿವಾರ ರಾತ್ರಿ ಸಂಭವಿಸಿದೆ.
ರವಿವಾರ ರಾತ್ರಿ ನಡೆದ ದುರಂತದಲ್ಲಿ ವಡುತಲ ನಿವಾಸಿ ಮನೋಜ್ ಉನ್ನಿ ಪ್ರಾಣ ಕಳೆದುಕೊಂಡಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.
ಈ ಹಗ್ಗವನ್ನು ರಸ್ತೆಗೆ ಅಡ್ಡಲಾಗಿ ಕಟ್ಟಿರುವ ಬಗ್ಗೆ ಯಾವ ಎಚ್ಚರಿಕೆಯನ್ನೂ, ಫಲಕವನ್ನೂ ಹಾಕಲಾಗಿಲ್ಲ. ರಾತ್ರಿ ಹೊತ್ತಿನಲ್ಲಿ ಹಗ್ಗವನ್ನು ಗುರುತಿಸುವುದು ಕಷ್ಟವಾಗಿತ್ತು ಎಂದು ಮೃತ ಬೈಕ್ ಸವಾರನ ಕುಟುಂಬಿಕರು ಹೇಳಿದ್ದಾರೆ.
‘‘ಪ್ರಧಾನಿ ಭೇಟಿಯ ಸಂದರ್ಭದಲ್ಲಿ ಕೈಗೊಂಡ ಭದ್ರತಾ ಏರ್ಪಾಡಿನ ಭಾಗವಾಗಿ ಹಗ್ಗವನ್ನು ಕಟ್ಟಲಾಗಿತ್ತು. ಆದರೆ, ಅದು ರಾತ್ರಿಯಲ್ಲಿ ವಾಹನ ಸವಾರರಿಗೆ ಕಾಣುವಂತೆ ಯಾವುದೇ ಪ್ರತಿಫಲಕ ರಿಬ್ಬನ್ಗಳ ವ್ಯವಸ್ಥೆ ಮಾಡಿರಲಿಲ್ಲ’’ ಎಂದು ಮೃತರ ಸಂಬಂಧಿಕರೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.





