ಭಾರತೀಯ ಸೈನಿಕರು ಪಾಕಿಸ್ತಾನವನ್ನು ಕ್ಷಣಾರ್ಧದಲ್ಲಿ ಮಂಡಿಯೂರುವಂತೆ ಮಾಡಿದ್ದಾರೆ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ (Photo: PTI)
ಭೋಪಾಲ್ : ಇದು ಪರಮಾಣು ಬೆದರಿಕೆಗೆ ಹೆದರದ ನವ ಭಾರತ, ಭಾರತೀಯ ಸೈನಿಕರು ಪಾಕಿಸ್ತಾನವನ್ನು ಕ್ಷಣಾರ್ಧದಲ್ಲಿ ಮಂಡಿಯೂರುವಂತೆ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
75ನೇ ಹುಟ್ಟುಹಬ್ಬದ ದಿನದಂದು ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಿನ್ನೆಯಷ್ಟೇ, ರಾಷ್ಟ್ರ ಮತ್ತು ಜಗತ್ತು ಮತ್ತೋರ್ವ ಪಾಕಿಸ್ತಾನಿ ಭಯೋತ್ಪಾದಕ ಅಳುವುದನ್ನು ನೋಡಿದೆ. ಇದು ಹೊಸ ಭಾರತ, ಯಾರು ಕೂಡ ಪರಮಾಣು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ.
ಭಾರತೀಯ ಸೈನಿಕರು ಪಾಕಿಸ್ತಾನವನ್ನು ಕ್ಷಣಾರ್ಧದಲ್ಲಿ ಮಂಡಿಯೂರುವಂತೆ ಮಾಡಿದ್ದಾರೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಯೋತ್ಪಾದಕರ ಕೇಂದ್ರಗಳನ್ನು ನಾಶಪಡಿಸಲಾಗಿದೆ ಎಂದು ಹೇಳಿದರು.
ಧಾರ್ ಜಿಲ್ಲೆಯಿಂದ 'ಸ್ವಸ್ಥ ನಾರಿ ಸಶಕ್ತ ಪರಿವಾರ್' ಮತ್ತು 'ರಾಷ್ಟ್ರೀಯ ಪೋಷಣ್ ಮಾಹ್' ಅಭಿಯಾನಕ್ಕೆ ಪ್ರಧಾನಿ ಇದೇ ವೇಳೆ ಚಾಲನೆ ನೀಡಿದರು.
Next Story





