ಭಾರತದಲ್ಲಿ ವಾಸಿಸಲು ಬಯಸುವವರು ರಾಮ, ಕೃಷ್ಣರಿಗೆ ಜೈ ಎನ್ನಬೇಕು: ಮಧ್ಯಪ್ರದೇಶ ಸಿಎಂ

PC: Screengrab/ x.com/dhruvrahtee
ಅಶೋಕನಗರ (ಮಧ್ಯಪ್ರದೇಶ): ಭಾರತದಲ್ಲಿ ಜೀವಿಸಲು ಬಯಸುವ ಎಲ್ಲರೂ ಹಿಂದೂ ದೇವರಾದ ರಾಮ ಮತ್ತು ಕೃಷ್ಣನಿಗೆ ಜೈ ಎನ್ನಬೇಕು ಎಂದು ಹೇಳಿಕೆ ನೀಡುವ ಮೂಲಕ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಎಲ್ಲ ಧರ್ಮೀಯರಿಗೂ ಆಯಾ ಧರ್ಮವನ್ನು ಅನುಸರಿಸಲು ಅವಕಾಶವಿದೆ. ಆದರೆ ಅವರು ದೇಶಭಕ್ತರಾಗಿರಬೇಕು. ಏಕೆಂದರೆ ಭಾರತ ದೇಶವಾಗಿ ಉಳಿದರೆ ಮಾತ್ರ ಅವರ ಅಸ್ತಿತ್ವ ಉಳಿಯುತ್ತದೆ ಎಂದು ಅವರು ವಿಶ್ಲೇಷಿಸಿದರು. ಅಶೋಕನಗರ ಜಿಲ್ಲೆಯ ಚಂಡೇರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಈ ಹೇಳಿಕೆ ನೀಡಿದ್ದಾರೆ.
"ದೇಶ ಹಿಂದೂ ಮತ್ತು ಮುಸ್ಲಿಮರು ಎಂದು ಪ್ರತ್ಯೇಕಿಸುವುದಿಲ್ಲ. ಆದರೆ ಜನ ದೇವರು, ಸೃಷ್ಟಿ, ಬ್ರಹ್ಮಾಂಡವನ್ನು ತಿಳಿದುಕೊಳ್ಳುವುದು ಅಗತ್ಯ. ರಹೀಮ್ ಹಾಗೂ ರಾಸ್ ಖಾನ್ (ಹಿಂದೂ ದೇವರ ಗುಣಗಾನ ಮಾಡಿದ್ದ ಮಧ್ಯಕಾಲೀನ ಭಾರತದ ಕವಿ ಹಾಗೂ ಸಂತರು) ಇದೇ ನೆಲದಲ್ಲಿ ಜನಿಸಿದವರು ಎಂದರು.
"ನಾವು ಈ ನೆಲದ ಮಣ್ಣಿನೊಂದಿಗೆ ಸಂಪರ್ಕ ಬೆಳೆಸಿಕೊಳ್ಳಬೇಕು. ರಹೀಮ್ ಹಾಗೂ ರಾಸ್ ಖಾನ್ ಅವರನ್ನು ನಾವು ಶತಮನಗಳಿಂದ ನೆನೆಸಿಕೊಳ್ಳುತ್ತೇವೆ. ಆದರೆ ಎಚ್ಚರಿಕೆಯಿಂದ ಇರಿ. ಇಲ್ಲಿಯ ಅನ್ನ ತಿಂದು ಬೇರೆಡೆ ನಂಬಿಕೆ ಹೊಂದಿರುವುದು ಇಲ್ಲಿ ಕಾರ್ಯಸಾಧುವಲ್ಲ" ಎಂದು ಹೇಳಿದರು.
"ನೀವು ಭಾರತದಲ್ಲಿ ಜೀವಿಸಲು ಬಯಸುವುದಾದರೆ, ನೀವು ರಾಮ- ಕೃಷ್ಣರ ಗುಣಗಾನ ಮಾಡಲೇಬೇಕು. (ಭಾರತ್ ಮೇ ರಹನಾ ಹೋಗಾ ತೋ ರಾಮ್ ಕೃಷ್ಣ್ ಕಿ ಜೈ ಕಹ್ನಾ ಹೋಗಾ). ಅವರ ಹೊರತಾಗಿ ಏನೂ ಇರುವುದಿಲ್ಲ. ದೇಶದಲ್ಲಿ ಪ್ರತಿಯೊಬ್ಬರನ್ನೂ ಗೌವಿಸುತ್ತೇವೆ. ಯಾರನ್ನೂ ನಾವು ಅವಮಾನಿಸುವುದಿಲ್ಲ ಎಂದರು.
'If you want to live in India, you have to say Jai Ram and Krishna'
— Dhruv Rathee (Parody) (@dhruvrahtee) August 26, 2024
This is the language of MP CM Mohan Yadav
pic.twitter.com/zYIFWBLoHn