ಕೇರಳ | ಒಂದೇ ಗುಂಡಿಗೆ ಬಿದ್ದ ಹುಲಿ, ನಾಯಿ: ಅರಣ್ಯ ಇಲಾಖೆಯಿಂದ ರಕ್ಷಣೆ

Photo Credit: X/@BobinsAbraham
ಇಡುಕ್ಕಿ: ತಮಿಳುನಾಡು ಗಡಿ ಸಮೀಪದ ಮೈಲಾಡುಂಪರೈ ಬಳಿ 9 ಅಡಿ ಆಳದ ಗುಂಡಿಯಲ್ಲಿ ಒಟ್ಟಿಗೆ ಸಿಲುಕಿಕೊಂಡಿದ್ದ ಹುಲಿ ಮತ್ತು ನಾಯಿಯನ್ನು ರಕ್ಷಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಬೆಳಿಗ್ಗೆ 7ಗಂಟೆಯ ಸುಮಾರಿಗೆ ಹುಲಿ ನಾಯಿಯನ್ನು ಬೆನ್ನಟ್ಟುತ್ತಿದ್ದಾಗ ಎರಡೂ ಪ್ರಾಣಿಗಳು ಗುಂಡಿಗೆ ಬಿದ್ದಿವೆ. ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನು ಶಾಂತಗೊಳಿಸಲಾಯಿತು. ನಾಯಿಯೂ ಬೊಗಳುತ್ತಿದ್ದ ಕಾರಣ ಅದಕ್ಕೂ ಅರವಳಿಕೆ ಚುಚ್ಚುಮದ್ದನ್ನು ನೀಡಲಾಗಿದೆ.
ಮಧ್ಯಾಹ್ನದ ವೇಳೆ ಹುಲಿ ಪ್ರಶಾಂತವಾಗಿತ್ತು. ಬಲೆಯ ಮೂಲಕ ಎರಡೂ ಪ್ರಾಣಿಯನ್ನು ಮೇಲಕ್ಕೆತ್ತಲಾಗಿದೆ. ಗುಂಡಿಗೆ ಬಿದ್ದಿದ್ದರಿಂದ ಎರಡೂ ಪ್ರಾಣಿಗಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಹೇಳಿದರು.
ಹುಲಿಯನ್ನು ಪೆರಿಯಾರ್ ಪ್ರಾಣಿಧಾಮದಲ್ಲಿ ಬಿಡುಗಡೆ ಮಾಡಲಾಗಿದೆ. ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಹುಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
— Bobins Abraham Vayalil (@BobinsAbraham) June 8, 2025
Next Story







