20 ದಿನಗಳಲ್ಲಿ 23 ಸಾವಿರ ರೂ.; ಚಿನ್ನದ ನಾಗಾಲೋಟ!

ಸಾಂದರ್ಭಿಕ ಚಿತ್ರ (AI)
ಸತತವಾಗಿ ಏರುತ್ತಿರುವ ಚಿನ್ನ ಇಳಿಕೆಯ ಹಾದಿ ಕಾಣುತ್ತಲೇ ಇಲ್ಲ. ಹತ್ತು ಗ್ರಾಂ ಚಿನ್ನದ ದರ 20 ದಿನಗಳಲ್ಲಿ 23 ಸಾವಿರದಷ್ಟು ಏರಿಕೆ ಕಂಡಿದೆ.
ಚಿನ್ನದ ದರ ನಿರಂತರವಾಗಿ ಏರು ಹಾದಿಯಲ್ಲಿದ್ದು, ಸಾರ್ವಕಾಲಿಕ ದಾಖಲೆ ದರಗಳನ್ನು ದಾಟುತ್ತಿದೆ. ಜನವರಿ 10ರಂದು ಒಂದೇ ದಿನದಲ್ಲಿ ಹತ್ತು ಗ್ರಾಂ ಚಿನ್ನದ ದರ 2,500 ರೂ.ಗೆ ಏರಿದೆ. ಜನವರಿ 20ರಂದು ದೇಸೀ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರು ಹಾದಿಯಲ್ಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರುತ್ತಿರುವುದು ದೇಶೀ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಚಿನ್ನ-ಬೆಳ್ಳಿ ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಆದರೆ, ಅಮೆರಿಕದ ಆರ್ಥಿಕತೆ ಬಲಗೊಂಡರೆ ಚಿನ್ನ ಶೇ 5-20ರಷ್ಟು ಅಗ್ಗವಾಗಬಹುದು ಎಂದು ವಿಶ್ವ ಚಿನ್ನದ ಆಯೋಗ ತಿಳಿಸಿದೆ.
ಇಂದು ಮತ್ತೆ ಶುದ್ಧ ಚಿನ್ನದ ಬೆಲೆ ಹತ್ತು ಗ್ರಾಂಗೆ ಸಾವಿರ ರೂಪಾಯಿ ಮೇಲ್ಪಟ್ಟು ಏರಿಕೆಯಾಗಿದೆ. ಇತ್ತೀಚೆಗೆ ಬೆಳ್ಳಿ ದರವೂ ಕೆಜಿಗೆ ಹತ್ತು ಸಾವಿರ ರೂಪಾಯಿ ಏರಿಕೆಯಾಗಿ 3,15,000ಕ್ಕೆ ತಲುಪಿದೆ. 2026 ಜನವರಿಯಲ್ಲಿ ಕೇವಲ 20 ದಿನಗಳಲ್ಲಿ ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ 2,348 ರೂ. ಏರಿಕೆಯಾಗಿದೆ. ಜನವರಿ 19ರಂದು ಒಂದೇ ದಿನದಲ್ಲಿ ಹತ್ತು ಗ್ರಾಂ ಶುದ್ಧ ಚಿನ್ನದ ಬೆಲೆ (24 ಕ್ಯಾರೆಟ್) 2,460 ರಷ್ಟು ಏರಿಕೆ ಕಂಡಿದೆ. ಹೀಗಾಗಿ ಹತ್ತು ಗ್ರಾಂ ಶುದ್ಧ ಚಿನ್ನದ ದರ 1,46,240 ರೂ.ಗಳಿಗೆ ಏರಿದೆ.
ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?
ಮಂಗಳವಾರ ಜನವರಿ 20ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ವಿಪರೀತ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,728 (+104) ರೂ. ಗೆ ಏರಿಕೆ ಕಂಡಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,500 (+95) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,046 (+78) ರೂ. ಬೆಲೆಗೆ ತಲುಪಿದೆ.
ಭಾರತದಲ್ಲಿ ವಿವಿಧ ನಗರಗಳಲ್ಲಿ ಒಂದು ಗ್ರಾಂ ಚಿನ್ನದ ಬೆಲೆ (ಬೆಳಗ್ಗೆ 8 ಗಂಟೆ) ಹೀಗಿದೆ:
ಚೆನ್ನೈ: 24 ಕ್ಯಾರೆಟ್ 14,674 ರೂ., 22 ಕ್ಯಾರೆಟ್ 13,451 ರೂ., 18 ಕ್ಯಾರೆಟ್ 11,231 ರೂ.
ಮುಂಬೈ: 24 ಕ್ಯಾರೆಟ್ 14,625 ರೂ., 22 ಕ್ಯಾರೆಟ್ 13,406 ರೂ., 18 ಕ್ಯಾರೆಟ್ 10,969 ರೂ.
ದಿಲ್ಲಿ: 24 ಕ್ಯಾರೆಟ್ ರೂ14,640 ರೂ., 22 ಕ್ಯಾರೆಟ್ 13,406 ರೂ., 18 ಕ್ಯಾರೆಟ್ 10,984 ರೂ.
ಕೋಲ್ಕತ್ತಾ: 24 ಕ್ಯಾರೆಟ್ 14,625 ರೂ., 22 ಕ್ಯಾರೆಟ್ 13,355 ರೂ., 18 ಕ್ಯಾರೆಟ್ 10,969 ರೂ.
ಬೆಂಗಳೂರು: 24 ಕ್ಯಾರೆಟ್ 14,625 ರೂ., 22 ಕ್ಯಾರೆಟ್ 13,406 ರೂ., 18 ಕ್ಯಾರೆಟ್ 10,969 ರೂ.
ಹೈದರಾಬಾದ್: 24 ಕ್ಯಾರೆಟ್ 14,626 ರೂ., 22 ಕ್ಯಾರೆಟ್ 13,406 ರೂ., 18 ಕ್ಯಾರೆಟ್ 10,969 ರೂ.
ಕೇರಳ: 24 ಕ್ಯಾರೆಟ್ 14,625 ರೂ., 22 ಕ್ಯಾರೆಟ್ 13,406 ರೂ., 18 ಕ್ಯಾರೆಟ್ 10,969 ರೂ.
ಪುಣೆ: 24 ಕ್ಯಾರೆಟ್ 14,625 ರೂ., 22 ಕ್ಯಾರೆಟ್13,406 ರೂ., 18 ಕ್ಯಾರೆಟ್ 10,969 ರೂ.
ವಡೋದರಾ: 24 ಕ್ಯಾರೆಟ್ 14,630 ರೂ., 22 ಕ್ಯಾರೆಟ್ 13,411ರೂ., 18 ಕ್ಯಾರೆಟ್ 10,974 ರೂ.
ಅಹಮದಾಬಾದ್: 24 ಕ್ಯಾರೆಟ್ 14,630 ರೂ., 22 ಕ್ಯಾರೆಟ್13,411 ರೂ., 18 ಕ್ಯಾರೆಟ್ 10,974 ರೂ.







