ವಂಚನೆ | ಕಳೆದ ಒಂದು ವರ್ಷದಲ್ಲಿ 21 ಲಕ್ಷಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳನ್ನು ಬ್ಲಾಕ್ ಮಾಡಿದ TRAI

PC : newsonair.gov.in
ಹೊಸದಿಲ್ಲಿ: ಕಳೆದ ಒಂದು ವರ್ಷದಲ್ಲಿ ವಂಚನೆಯಲ್ಲಿ ತೊಡಗಿದ್ದ 21 ಲಕ್ಷಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳು, ವಂಚನೆಯ ಸಂದೇಶಗಳನ್ನು ಕಳುಹಿಸುತ್ತಿದ್ದ ಒಂದು ಲಕ್ಷ ಸಂಸ್ಥೆಗಳ ವಿರುದ್ಧ ಕ್ರಮವನ್ನು ಕೈಗೊಂಡಿರುವುದಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ತಿಳಿಸಿದೆ.
ನಾಗರಿಕರ ದೂರುಗಳಿಗೆ ಪ್ರತಿಯಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಜನರು ದೂರು ನೀಡುವುದು ದೇಶದಾದ್ಯಂತ ಟೆಲಿಕಾಂ ದುರುಪಯೋಗವನ್ನು ತಡೆಯುವ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
TRAI DND ಅಪ್ಲಿಕೇಶನ್ಗಳ ಮೂಲಕ ವಂಚನೆಯ ಕರೆಗಳು ಮತ್ತು SMSಗಳ ಬಗ್ಗೆ ದೂರು ನೀಡಲು TRAI ನಾಗರಿಕರಿಗೆ ಒತ್ತಾಯಿಸಿದೆ. ಈ ಆಪ್ ಮೂಲಕ ದೂರು ನೀಡಿದಾಗ TRAI ಮತ್ತು ಟೆಲಿಕಾಂ ಕಂಪೆನಿಗಳು ಆ ಸಂಖ್ಯೆಯನ್ನು ಪತ್ತೆ ಹಚ್ಚಿ ಪರಿಶೀಲಿಸಲು ಮತ್ತು ಶಾಶ್ವತವಾಗಿ ಸಂಪರ್ಕ ಕಡಿತಗೊಳಿಸಲು ಸಾಧ್ಯವಾಗುತ್ತದೆ ಎಂದು TRAI ತಿಳಿಸಿದೆ.
Next Story





