ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ರೈಲ್ವೇ ಟಿಟಿಯಂತೆ ನಟಿಸಿದ ನಿರುದ್ಯೋಗಿ ಯುವಕ
ಸರ್ಕಾರಿ ಕೆಲಸದ ಬೇಡಿಕೆ ಇಟ್ಟಿದ್ದ ಯುವತಿ ಕುಟುಂಬ

Photo credit: NDTV
ವಾರಣಾಸಿ: ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ರೈಲ್ವೆ ಟಿಕೆಟ್ ಪರೀಕ್ಷಕನಂತೆ (TTE) ನಟಿಸುತ್ತಿದ್ದ ನಿರುದ್ಯೋಗಿ ಯುವಕನನ್ನು ವಾರಣಾಸಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಧ್ಯಪ್ರದೇಶದ ರೇವಾ ಪಟ್ಟಣದ ಆದರ್ಶ್ ಜೈಸ್ವಾಲ್ ಎಂದು ಗುರುತಿಸಲಾಗಿದೆ. ಬಂಧನದ ವೇಳೆ ಆತನ ಬಳಿಯಿಂದ ಟಿಟಿಇ ನಕಲಿ ಗುರುತಿನ ಚೀಟಿಯನ್ನೂ ವಶಪಡಿಸಿಕೊಳ್ಳಲಾಗಿದೆ.
ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಬೇಕಾದರೆ, ಸರ್ಕಾರಿ ಕೆಲಸವನ್ನು ಪಡೆದಿರಬೇಕೆಂದು ಯುವತಿಯ ಕುಟುಂಬ ಷರತ್ತು ಹಾಕಿದ್ದರಿಂದ ತಾನು ಟಿಟಿಯಂತೆ ನಟಿಸುತ್ತಿದ್ದೆ ಎಂದು ಯುವಕ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
Next Story





