ಹೈದರಾಬಾದ್ | ಭೂಲಕ್ಷ್ಮೀ ಮಾತಾ ದೇವಸ್ಥಾನದ ವಿಗ್ರಹ ಧ್ವಂಸ, ಭುಗಿಲೆದ್ದ ಪ್ರತಿಭಟನೆ

ಡಿಸಿಪಿ (ಆಗ್ನೇಯ) ಕಾಂತಿಲಾಲ್ ಪಟೇಲ್ | PC : PTI
ಹೈದರಾಬಾದ್ : ಹೈದರಾಬಾದ್ನ ಸಂತೋಷ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿಯ ಶ್ರೀಭೂಲಕ್ಷ್ಮೀ ಮಾತಾ ದೇವಸ್ಥಾನದಲ್ಲಿಯ ವಿಗ್ರಹವನ್ನು ದುಷ್ಕರ್ಮಿಗಳು ಧ್ವಂಸಗೊಂಡಿದ್ದು, ಇದನ್ನು ಖಂಡಿಸಿ ಭಾರೀ ಸಂಖ್ಯೆಯಲ್ಲಿ ಜನರು ಪ್ರತಿಭಟನೆಗಳನ್ನು ನಡೆಸಿದರು.
ಸೋಮವಾರ ಮಧ್ಯರಾತ್ರಿಯ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಡಿಸಿಪಿ (ಆಗ್ನೇಯ) ಕಾಂತಿಲಾಲ್ ಪಟೇಲ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
‘ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಈ ಘಟನೆಗೆ ಕಾರಣರಾದ ಎಲ್ಲರ ವಿರುದ್ಧ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಈವರೆಗೆ ಈ ಪ್ರಕರಣವು ಯಾವುದೇ ರಾಜಕೀಯ ಕೋನವನ್ನು ಹೊಂದಿಲ್ಲ’ ಎಂದು ಅವರು ಹೇಳಿದರು.
Next Story





