Budget 2026: ಏನು ಅಗ್ಗವಾಗಿದೆ? ಏನು ತುಟ್ಟಿಯಾಗಿದೆ?

ಸಾಂದರ್ಭಿಕ ಚಿತ್ರ (AI)
ಕೇಂದ್ರ ಸರ್ಕಾರ ರವಿವಾರ ಮಂಡಿಸಿದ ಬಜೆಟ್ ನಲ್ಲಿ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ನಿರ್ಣಾಯಕ ಔಷಧಿಗಳ ಮೇಲಿನ ಸುಂಕ ಕಡಿತವನ್ನು ಘೋಷಿಸಿದ್ದಾರೆ ಮತ್ತು ಹಿಂದಿನ ವರ್ಷಗಳಂತೆ, ʼಸಿನ್ ಗೂಡ್ಸ್ʼ (ಪಾಪದ ಸರಕು) ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದಾರೆ.
ಸರ್ಕಾರವು ಅಗತ್ಯ ಔಷಧಗಳು, ಎಲೆಕ್ಟ್ರಿಕ್ ವಾಹನಗಳು ಮತ್ತು ಚರ್ಮದ ಉತ್ಪನ್ನಗಳಂತಹ ಹಲವಾರು ಉತ್ಪನ್ನಗಳ ಮೇಲಿನ ಸುಂಕ ಮತ್ತು ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸಿದೆ. ಇದರಿಂದಾಗಿ ಈ ವಸ್ತುಗಳು ಅಗ್ಗವಾಗಿವೆ. ಕೈಗಡಿಯಾರಗಳು ಮತ್ತು ಆಲ್ಕೊಹಾಲ್ ಯುಕ್ತ ಪಾನೀಯಗಳು ಸೇರಿದಂತೆ ಐಷಾರಾಮಿ ಸರಕುಗಳು ದುಬಾರಿಯಾಗಲಿವೆ.
ವಿಮಾನ ಭಾಗಗಳು, ಮೈಕ್ರೋವೇವ್ , ಅಗತ್ಯ ಔಷಧಗಳು ಮತ್ತು ಕೆಲವು ಆಮದು ಮಾಡಿಕೊಳ್ಳುವ ಸರಕುಗಳು ಸೇರಿದಂತೆ ಉತ್ಪನ್ನಗಳು ಕಡಿಮೆ ಕಸ್ಟಮ್ ಸುಂಕವನ್ನು ಆಕರ್ಷಿಸಲಿವೆ. ಇದರಿಂದಾಗಿ ಅವು ಅಗ್ಗವಾಗುತ್ತವೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ
ಮಧುಮೇಹ ಮತ್ತು ಕ್ಯಾನ್ಸರ್ ರೋಗಿಗಳಿಗೆ ಔಷಧಿಗಳು ಸೇರಿದಂತೆ 17 ಔಷಧಿಗಳು ಸಹ ಅಗ್ಗವಾಗುವ ನಿರೀಕ್ಷೆಯಿದೆ. ಇದಲ್ಲದೆ ಭಾರತದಲ್ಲಿ ತಯಾರಿಸಿದ ಸ್ಮಾರ್ಟ್ಫೋನ್ಗಳು ಮತ್ತು ಟ್ಯಾಬ್ಲೆಟ್ಗಳು ಅಗ್ಗವಾಗಲಿವೆ.
ವಿದೇಶಿ ಪ್ರವಾಸ ಕಾರ್ಯಕ್ರಮದ ಪ್ಯಾಕೇಜ್ಗಳ ಮಾರಾಟದ ಮೇಲಿನ ಟಿಸಿಎಸ್ ದರವನ್ನು ಶೇ 2% ಕ್ಕೆ ಇಳಿಸಿದ್ದರಿಂದ ವಿದೇಶಿ ಪ್ರವಾಸ ಪ್ಯಾಕೇಜ್ಗಳು ಅಗ್ಗವಾಗಲಿವೆ.
ಸರ್ಕಾರವು ಪ್ರಮುಖ ಅಡುಗೆ ಉಪಕರಣದ ತಯಾರಿಕೆಯಲ್ಲಿ ಬಳಸುವ ನಿರ್ದಿಷ್ಟ ಭಾಗಗಳ ಮೇಲೆ ಮೂಲ ಕಸ್ಟಮ್ಸ್ ಸುಂಕ ವಿನಾಯಿತಿ ನೀಡಿದ್ದರಿಂದ ಮೈಕ್ರೋವೇವ್ ಓವನ್ ಬೆಲೆ ಇಳಿಕೆ ಆಗಲಿದೆ.
ಏನು ಅಗ್ಗವಾಗಿದೆ?
► 17 ಕ್ಯಾನ್ಸರ್ ಔಷಧಗಳು
► ಸಮುದ್ರ ಆಹಾರ
► ಚರ್ಮದ ಉತ್ಪನ್ನಗಳು
► ಸ್ಮಾರ್ಟ್ ಫೋನ್ಗಳು
► EV ಬ್ಯಾಟರಿಗಳು
► ಸೋಲಾರ್ ಪ್ಯಾನೆಲ್ಗಳು
► ಮೈಕ್ರೋವೇವ್ ಓವನ್ಗಳು
► ಕ್ರೀಡಾ ಸಾಮಗ್ರಿಗಳು
► 7 ಜೀವ ಉಳಿಸುವ ಔಷಧಗಳು
► ಲೀಥಿಯಂ ಬ್ಯಾಟರಿ ಘಟಕಗಳು
► ಮಧುಮೇಹ ಸಂಬಂಧಿತ ಔಷಧಿಗಳು
► ವಿದೇಶಿ ಪ್ರಯಾಣ
► ನಾಗರಿಕ ತರಬೇತಿಯ ವಿಮಾನಯಾನ ಭಾಗಗಳು
► ವೈಯಕ್ತಿಕ ಬಳಕೆಯ ಎಲೆಕ್ಟ್ರಾನಿಕ್ ಉತ್ಪನ್ನಗಳ ತೆರಿಗೆ ಶೇ 20ರಿಂದ 10ಕ್ಕೆ ಇಳಿಕೆ
ತುಟ್ಟಿ ಯಾವುವು?
► ಆಲ್ಕೋಹಾಲ್ ಇನ್ನಷ್ಟು ತುಟ್ಟಿಯಾಗಿದೆ.
► ತಂಬಾಕು ಉತ್ಪನ್ನಗಳಾದ ಸಿಗರೇಟು, ಬೀಡಿ, ಗುಟ್ಕಾ ಮತ್ತು ಪಾನ್ ಮಸಾಲ
► ಇ-ರೀಡರ್ ಗಳು
► CD-ROMs
► ಡಿಜಿಟಲ್ ಕ್ಯಾಮರಾಗಳು
► ವೀಡಿಯೊ ಗೇಮ್ಗಳು ಮತ್ತು ಸಾಫ್ಟ್ವೇರ್
► ಕೊಡೆಗಳ ಮೇಲೆ ಶೇ 10ರಷ್ಟು ಸುಂಕ ಹೇರಲಾಗಿದೆ
► ಕಾಫಿ ದುಬಾರಿಯಾಗುವ ಸಾಧ್ಯತೆಯಿದೆ.
► ವಯಸ್ಕರ ಸ್ಯಾನಿಟರಿ ಪ್ಯಾಡ್ ಗಳು
►ಖಾಂಜಿ (ಕಬ್ಬಿಣ, ಕಲ್ಲಿದ್ದಲು, ಉಪ್ಪು ಮೊದಲಾದ ಖನಿಜಗಳು)







