ಉತ್ತರ ಪ್ರದೇಶ : ಇರಿತದ ಗಾಯಗಳೊಂದಿಗೆ ಹೊಲದಲ್ಲಿ ದಲಿತ ವ್ಯಕ್ತಿಯ ಮೃತದೇಹ ಪತ್ತೆ

ಸಾಂದರ್ಭಿಕ ಚಿತ್ರ
ಮುಝಾಫರನಗರ,ನ.2: ಇಲ್ಲಿಗೆ ಸಮೀಪದ ಗ್ರಾಮವೊಂದರ ಹೊಲದಲ್ಲಿ ದಲಿತ ವ್ಯಕ್ತಿಯೋರ್ವನ ಮೃತದೇಹವು ಇರಿತದ ಗಾಯಗಳೊಂದಿಗೆ ಪತ್ತೆಯಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು 29 ವರ್ಷ ವಯಸ್ಸಿನ ಸೋನು ಎಂದು ಗುರುತಿಸಲಾಗಿದೆ. ದೂರವಾಣಿ ಕರೆಯೊಂದು ಬಂದ ಬಳಿಕ ಸೋನು ಮನೆಯಿಂದ ಹೊರಗೆ ಹೋದವರು ಮತ್ತೆ ವಾಪಸ್ ಬರಲಿಲ್ಲವೆಂದು ಅವರ ಕುಟುಂಬಿಕರು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
ಸೋನು ಅವರ ಮೃತದೇಹವು ಘಾರಿ ಫಿರೋಝಾಬಾದ್ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದ್ದು, ದೇಹದಲ್ಲಿ ಹಲವಾರು ಇರಿತದ ಗಾಯಗಳು ಕಂಡುಬಂದಿರುವುದಾಗಿ ಪೊಲೀಸ್ ಅಧೀಕ್ಷಕ (ಗ್ರಾಮಾಂತರ) ಆದಿತ್ಯ ಬನ್ಸಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮೃತದೇಹ ಪತ್ತೆಯಾದ ಸ್ಥಳದಲ್ಲಿ ರಕ್ತಸಿಕ್ತ ಚಾರು ಹಾಗೂ ಸೋನುವಿನ ಬೈಕ್ ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
Next Story





