ಕೇಂದ್ರ ಲೋಕಸೇವಾ ಆಯೋಗಕ್ಕೆ ಅಧ್ಯಕ್ಷರೇ ಇಲ್ಲ!

ಏಪ್ರಿಲ್ ತಿಂಗಳಲ್ಲಿ ಯುಪಿಎಸ್ಸಿ ನಡೆಸಿದ ನಾಗರೀಕ ಸೇವೆ ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳು | Photo : PTI
ಹೊಸದಿಲ್ಲಿ: ವಿವಿಧ ಪರೀಕ್ಷೆಗಳು ಮತ್ತು ಸಂದರ್ಶನಗಳನ್ನು ನಡೆಸುವ ಮೂಲಕ ಅಖಿಲ ಭಾರತ ಸೇವೆಗಳು ಮತ್ತು ಕೇಂದ್ರ ನಾಗರಿಕ ಸೇವೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡುವ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಪ್ರಸ್ತುತ ಅಧ್ಯಕ್ಷರಿಲ್ಲದೆ ಕಾರ್ಯನಿರ್ವಹಿಸುತ್ತಿದೆ.
ಯುಪಿಎಸ್ಸಿ ಅಧ್ಯಕ್ಷೆ ಪ್ರೀತಿ ಸುಡಾನ್ ಕಳೆದ ಎಪ್ರಿಲ್ 29ರಂದು ತಮ್ಮ ಹುದ್ದೆಯಿಂದ ನಿವೃತ್ತರಾದರು. ಆದರೆ ಅವರಿಂದ ತೆರವಾದ ಸ್ಥಾನಕ್ಕೆ ಅಧ್ಯಕ್ಷರನ್ನು ಸರಕಾರ ಇನ್ನೂ ನೇಮಕ ಮಾಡಿಲ್ಲ.
ಯುಪಿಎಸ್ಸಿ ಅಧ್ಯಕ್ಷರನ್ನು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ ನೇಮಿಸುತ್ತದೆ. ಯುಪಿಎಸ್ಸಿ ಸದಸ್ಯರು ಸಾಮಾನ್ಯವಾಗಿ ಆರು ವರ್ಷಗಳ ಕಾಲ ಅಧಿಕಾರವನ್ನು ಹೊಂದಿರುತ್ತಾರೆ. ಪ್ರಸ್ತುತ, ಆಯೋಗದಲ್ಲಿ ಆರು ಸದಸ್ಯರಿದ್ದಾರೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರೀತಿ ಸುಡಾನ್ ಅವರನ್ನು ಜುಲೈ 2024ರಲ್ಲಿ UPSC ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.





