ಭಾರತಕ್ಕೆ 93 ಮಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಮಾರಾಟ ಒಪ್ಪಂದಕ್ಕೆ ಅಮೆರಿಕ ಅನುಮೋದನೆ

Photo | NDTV
ಹೊಸದಿಲ್ಲಿ : ಭಾರತಕ್ಕೆ 93 ಮಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಮಾರಾಟ ಒಪ್ಪಂದಕ್ಕೆ ಅಮೆರಿಕ ಅನುಮೋದಿಸಿದೆ.
ಈ ಒಪ್ಪಂದದಲ್ಲಿ 45.7 ಮಿಲಿಯನ್ ಡಾಲರ್ ವೆಚ್ಚದ ಜಾವೆಲಿನ್ ಕ್ಷಿಪಣಿ ವ್ಯವಸ್ಥೆ(Javelin Missile System) ಮತ್ತು ಅದರ ಉಪಕರಣಗಳು ಹಾಗೂ 47.1 ಮಿಲಿಯನ್ ಡಾಲರ್ ಮೌಲ್ಯದ 216 M982A1 ಎಕ್ಸ್ಕ್ಯಾಲಿಬರ್ ಟ್ಯಾಕ್ಟಿಕಲ್ ಪ್ರೊಜೆಕ್ಟ್ಸ್ ಸೇರಿವೆ.
"ಅಂದಾಜು 45.7 ಮಿಲಿಯನ್ ಡಾಲರ್ ವೆಚ್ಚದ ಜಾವೆಲಿನ್ ಕ್ಷಿಪಣಿ ವ್ಯವಸ್ಥೆ ಮತ್ತು ಅದಕ್ಕೆ ಸಂಬಂಧಿತ ಉಪಕರಣಗಳನ್ನು ಭಾರತಕ್ಕೆ ಮಾರಾಟ ಮಾಡಲು ವಿದೇಶಾಂಗ ಇಲಾಖೆ ಅನುಮೋದನೆ ನೀಡಿದೆ ಎಂದು ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ (DSCA) ತಿಳಿಸಿದೆ.
"ಈ ಪ್ರಸ್ತಾವಿತ ಒಪ್ಪಂದವು ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ ಮತ್ತು ಇಂಡೋ-ಪೆಸಿಫಿಕ್ ಮತ್ತು ದಕ್ಷಿಣ ಏಷ್ಯಾ ಪ್ರದೇಶಗಳಲ್ಲಿ ರಾಜಕೀಯ ಸ್ಥಿರತೆ, ಶಾಂತಿ ಮತ್ತು ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುವ ಭಾರತದ ಭದ್ರತಾ ವ್ಯವಸ್ಥೆಯನ್ನು ಸುಧಾರಿಸಲಿದೆ" ಎಂದು ಡಿಎಸ್ಸಿಎ ತಿಳಿಸಿದೆ.





