ಉತ್ತರ ಪ್ರದೇಶ: 350ಕ್ಕೂ ಹೆಚ್ಚು ಅಕ್ರಮ ಧಾರ್ಮಿಕ ತಾಣಗಳ ತೆರವು

ಯೋಗಿ ಆದಿತ್ಯನಾಥ | PTI
ಲಕ್ನೋ: ಇತ್ತೀಚಿನ ದಿನಗಳಲ್ಲಿ ಮದರಸಗಳು, ಮಸೀದಿಗಳು,ಮಝಾರ್ಗಳು ಮತ್ತು ಈದಗಾಗಳು ಸೇರಿದಂತೆ 350ಕ್ಕೂ ಅಧಿಕ ಅನಧಿಕೃತ ಧಾರ್ಮಿಕ ತಾಣಗಳಿಗೆ ಬೀಗ ಜಡಿಯಲಾಗಿದೆ ಅಥವಾ ನೆಲಸಮಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ಸರಕಾರವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಧಾರ್ಮಿಕ ಅತಿಕ್ರಮಣವನ್ನು ಸಹಿಸುವುದಿಲ್ಲ ಎಂಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸ್ಪಷ್ಟ ನಿರ್ದೇಶನದ ಮೇರೆಗೆ ಪಿಲಿಭಿತ್, ಶ್ರಾವಸ್ಥಿ ಮತ್ತು ಬಲರಾಮಪುರದಂತಹ ಜಿಲ್ಲಾಡಳಿತಗಳು ತೆರವು ಕಾರ್ಯಾಚರಣೆಗಳನ್ನು ನಡೆಸಿವೆ ಎಂದು ಹೇಳಿಕೆಯು ತಿಳಿಸಿದೆ.
ಯಾವುದೇ ಧರ್ಮದ ಹೆಸರಿನಲ್ಲಿ ಅತಿಕ್ರಮಣಕ್ಕೆ ಅವಕಾಶ ನೀಡುವುದಿಲ್ಲ. ಎಲ್ಲ ಅತಿಕ್ರಮಣಕಾರರು, ವಿಶೇಷವಾಗಿ ಅನಧಿಕೃತ ಧಾರ್ಮಿಕ ಸಂಸ್ಥೆಗಳನ್ನು ನಡೆಸುವವರ ವಿರುದ್ಧ ಕಾನೂನು ಕ್ರಮಗಳನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
Next Story





