ಉತ್ತರ ಪ್ರದೇಶ| ಯುವಕನಿಗೆ ಹಲ್ಲೆ ನಡೆಸಿ ಉಗುಳು ನೆಕ್ಕುವಂತೆ ಬಲವಂತ: ಓರ್ವ ಆರೋಪಿ ಪೊಲೀಸ್ ವಶಕ್ಕೆ

Photo Credit : freepressjournal.in
ದೆವರಿಯಾ,(ಡಿ.1): ಇಲ್ಲಿನ ಗ್ರಾಮವೊಂದರಲ್ಲಿ ಜನರ ಗುಂಪು ಯುವಕನೋರ್ವನಿಗೆ ಬೆಲ್ಟ್ ಹಾಗೂ ಚಪ್ಪಲಿಯಿಂದ ಥಳಿಸಿ ಉಗುಳು ನೆಕ್ಕುವಂತೆ ಬಲವಂತಪಡಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಬಳಿಕ ಪೊಲೀಸರು ಓರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
वीडीओ यूपी के देवरिया का है जहाँ जाति विशेष के सामंतियों ने PDA समाज के युवक को चप्पल पे थूक के चटवाया है ।
— GAURAV🇮🇳 (@GK010200) December 1, 2025
आप नहीं लगता पिछले 8 सालों से यूपी में सामंतियों का बोलबाला है ?? pic.twitter.com/U5Y61kJafj
ಗೋಬರಾಹಿ ಗ್ರಾಮದಲ್ಲಿ ನಡೆದಿದೆ ಎಂದು ಹೇಳಲಾದ ಘಟನೆಯ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ರವಿವಾರ ಸಂಜೆಯಿಂದ ಹರಿದಾಡುತ್ತಿದೆ.
ಸಂತ್ರಸ್ತನ ತಾಯಿ ದಾಖಲಿಸಿದ ಪೊಲೀಸ್ ದೂರಿನ ಪ್ರಕಾರ, ಅವರ ಪುತ್ರ ನವೆಂಬರ್ 29ರಂದು ಸಂಜೆ ಸುಮಾರು 3 ಗಂಟೆಗೆ ಶಾಪಿಂಗ್ಗಾಗಿ ದೇವರಿಯಾ ಪಟ್ಟಣಕ್ಕೆ ಹೋಗುತ್ತಿದ್ದ. ಈ ಸಂದರ್ಭ ಸಕ್ರಾ ಪರ್ ಹಾಗೂ ಗೋಬರಾಹಿ ಗ್ರಾಮಗಳ ನಾಲ್ವರು ಆತನಿಗೆ ತಡೆ ಒಡ್ಡಿದರು. ಅನಂತರ ಆ ಗುಂಪು ಆತನಿಗೆ ಹಲ್ಲೆ ನಡೆಸಿತು ಹಾಗೂ ಉಗುಳು ನೆಕ್ಕುವಂತೆ ಬಲವಂತಪಡಿಸಿತು.
ಅನಂತರ ರಾತ್ರಿ ಅದೇ ಗುಂಪು ಅವರ ಮನೆಗೆ ಆಗಮಿಸಿತು. ಮನೆಯ ಬಾಗಿಲು ಒಡೆಯಲು ಪ್ರಯತ್ನಿಸಿತು ಹಾಗೂ ಕಲ್ಲು ತೂರಾಟ ನಡೆಸಿತು ಎಂದು ದೂರಿನಲ್ಲಿ ಪ್ರತಿಪಾದಿಸಲಾಗಿದೆ.
‘‘ಈ ಕುರಿತು ಯುವಕನ ತಾಯಿ ದೂರು ದಾಖಲಿಸಿದ್ದಾರೆ. ಓರ್ವ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗುವುದು’’ ಎಂದು ದೆವರಿಯಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ವಿನೋದ್ ಕುಮಾರ್ ಸಿಂಗ್ ತಿಳಿಸಿದ್ದಾರೆ.







