ಉತ್ತರ ಪ್ರದೇಶ: ಕನ್ವರ್ ಯಾತ್ರಾಮಾರ್ಗದಲ್ಲಿ ಬಹಿರಂಗ ಮಾಂಸ ಮಾರಾಟಕ್ಕೆ ನಿಷೇಧ

ಸಾಂದರ್ಭಿಕ ಚಿತ್ರ | PC : PTI
ಲಕ್ನೋ: ಉತ್ತರ ಪ್ರದೇಶ ಸರಕಾರವು ಜು.22ರಿಂದ ಆರಂಭಗೊಳ್ಳುವ ಸಾಂಪ್ರದಾಯಿಕ ಕನ್ವರ್ ಯಾತ್ರೆಯ ಮಾರ್ಗದಲ್ಲಿ ಬಹಿರಂಗ ಮಾಂಸ ಮಾರಾಟ ಮತ್ತು ಖರೀದಿಯನ್ನು ನಿಷೇಧಿಸಲು ನಿರ್ಧರಿಸಿದೆ.
ಮುಖ್ಯಮಂತ್ರಿ ಆದಿತ್ಯನಾಥ್ ಅವರು ರವಿವಾರ ಮುಂಬರುವ ಹಬ್ಬಗಳಿಗಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸಿದ್ಧತೆಗಳನ್ನು ಪರಿಶೀಲಿಸಿದ ಸಂದರ್ಭ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಹಬ್ಬಗಳ ಹಿನ್ನೆಲೆಯಲ್ಲಿ ಜಾಗ್ರತೆ ವಹಿಸುವಂತೆ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕನ್ವರ್ ಯಾತ್ರೆಯ ಹಿನ್ನೆಲೆಯಲ್ಲಿ ಘಾಜಿಯಾಬಾದ್, ಮೀರತ್, ಅಯೋಧ್ಯೆ, ಬರೇಲಿ, ಪ್ರಯಾಗರಾಜ್, ವಾರಣಾಸಿ, ಬಾರಾಬಂಕಿ, ಬಸ್ತಿ ಮತ್ತು ಉತ್ತರಾಖಂಡ ಗಡಿಯಲ್ಲಿಯ ಜಿಲ್ಲೆಗಳು ಮುಖ್ಯವಾಗಿವೆ. ಭಕ್ತರ ನಂಬಿಕೆಯನ್ನು ಗೌರವಿಸಿ ಯಾತ್ರೆಯ ಮಾರ್ಗದಲ್ಲಿ ಎಲ್ಲಿಯೂ ಬಹಿರಂಗ ಮಾಂಸ ಮಾರಾಟ ಮತ್ತು ಖರೀದಿ ನಡೆಯಕೂಡದು ಎಂದು ಆದಿತ್ಯನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
Next Story





