ಉತ್ತರ ಪ್ರದೇಶ: ವಿಫಲ ಅತ್ಯಾಚಾರ ಯತ್ನ, ಆರು ವರ್ಷದ ಬಾಲಕಿಯನ್ನು ನೀರಿನ ಟ್ಯಾಂಕ್ ನಲ್ಲಿ ಮುಳುಗಿಸಿ ಹತ್ಯೆ

ಸಾಂದರ್ಭಿಕ ಚಿತ್ರ
ಆಗ್ರಾ: ಆರು ವರ್ಷದ ಬಾಲಕಿಯ ಅತ್ಯಾಚಾರ ಪ್ರಯತ್ನ ವಿಫಲಗೊಂಡು ಆಕೆಯನ್ನು ನೀರಿನ ಟ್ಯಾಂಕಿನಲ್ಲಿ ಮುಳುಗಿಸಿ, ಗುರುತು ಸಿಗದಂತಾಗಲು ತಲೆಯನ್ನು ಕಲ್ಲಿನಿಂದ ಜಜ್ಜಿದ ಘೋರ ಘಟನೆ ಆಗ್ರಾ ಜಿಲ್ಲೆಯ ಇತ್ಮಾದ್ಪುರ ಪೋಲಿಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ನಡೆದಿದೆ.
ಡಿ.30ರಂದು ಈ ಘಟನೆ ಸಂಭವಿಸಿದ್ದು, ಬಿಡಾಡಿ ದನಗಳಿಂದ ಬೆಳೆಗಳನ್ನು ರಕ್ಷಿಸಲು ನೇಮಕಗೊಂಡಿದ್ದ ಖಾಸಗಿ ಕಾವಲುಗಾರ ರಾಜವೀರ ಸಿಂಗ್ (43) ಎಂಬಾತನನ್ನು ಪೋಲಿಸರು ಬಂಧಿಸಿದ್ದಾರೆ.
ಪೋಲಿಸರು ತಿಳಿಸಿರುವಂತೆ ಸಿಂಗ್ ಮೊದಲು ಬಾಲಕಿಯ ಮೇಲೆ ಅತ್ಯಾಚಾರವನ್ನು ನಡೆಸಲು ಪ್ರಯತ್ನಿಸಿದ್ದ. ಅದು ವಿಫಲಗೊಂಡ ಬಳಿಕ ಹೊಲದಲ್ಲಿಯ ನೀರಿನ ಟ್ಯಾಂಕಿನಲ್ಲಿ ಆಕೆಯನ್ನು ಮುಳುಗಿಸಿ ಹತ್ಯೆಗೈದಿದ್ದ.
ಬಾಲಕಿಯ ತಂದೆಯ ದೂರಿನ ಮೇರೆಗೆ ಪೋಲಿಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
Next Story





