ಉತ್ತರ ಪ್ರದೇಶ: ಬಾಲಕಿಯ ಅಪಹರಣ, ಅಕ್ರಮ ಬಂಧನದಲ್ಲಿಟ್ಟು ಒಂದೂವರೆ ತಿಂಗಳು ಅತ್ಯಾಚಾರ

ಬಲಿಯಾ (ಉತ್ತರ ಪ್ರದೇಶ): 15 ವರ್ಷ ವಯಸ್ಸಿನ ಬಾಲಕಿಯನ್ನು ಅಪಹರಿಸಿ, ಆಕೆಯನ್ನು ಅಕ್ರಮವಾಗಿ ಕೂಡಿಹಾಕಿ ಒಂದೂವರೆ ತಿಂಗಳ ಕಾಲ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಬಲಿಯಾ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಕೊತ್ವಾಲಿ ಠಾಣೆ ವ್ಯಾಪ್ತಿಯ ಗ್ರಾಮದಿಂದ ಜುಲೈ 9ರಂದು ಈ ಬಾಲಕಿ ಕಾಣೆಯಾಗಿದ್ದು, ಹುಡುಗಿಯ ತಂದೆ ಮರು ದಿನ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಆಗಸ್ಟ್ 26ರಂದು ಬಾಲಕಿಯನ್ನು ದಿಯೋರಿಯಾದಿಂದ ರಕ್ಷಿಸಲಾಗಿದ್ದು, ಆಕೆ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಾಳೆ ಎಂದು ಠಾಣಾಧಿಕಾರಿ ರಾಜೀವ್ ಸಿಂಗ್ ವಿವರಿಸಿದ್ದಾರೆ.
ಬಿಹಾರದ ಸಿವಾನ್ ಜಿಲ್ಲೆಯ ರಾಹುಲ್ ಕುಮಾರ್ ಸಿಂಗ್ (19) ಎಂಬ ಯುವಕ ತನ್ನನ್ನು ಅಪಹರಿಸಿ ದಿಯೋರಿಯಾಗೆ ಕರೆದೊಯ್ದಿದ್ದಾನೆ. ಅಕ್ರಮವಾಗಿ ಒಂದೂವರೆ ತಿಂಗಳ ಕಾಲ ಕೂಡಿಹಾಕಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ.
ಆರೋಪಿಯನ್ನು ಸೋಮವಾರ ಬಂಧಿಸಲಾಗಿದೆ ಎಂದು ಠಾಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
Next Story





