ಉತ್ತರ ಪ್ರದೇಶ : ಆಸ್ತಿ ವರ್ಗಾವಣೆಗೆ ತಿರಸ್ಕರಿಸಿದ ತಾಯಿಯ ಶಿರಚ್ಛೇದನ ಮಾಡಿದ ಮಗ

ಸಾಂದರ್ಭಿಕ ಚಿತ್ರ
ಸೀತಾಪುರ: ತನ್ನ ತಾಯಿ ಜಮೀನನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಲು ನಿರಾಕರಿಸಿದ್ದರಿಂದ ಆಕ್ರೋಶಿತ ವ್ಯಕ್ತಿ ಆಕೆಯ ಶಿರಚ್ಛೇದನವನ್ನು ಮಾಡಿದ ಘಟನೆ ಇಲ್ಲಿಯ ತಾಲಗಾಂವ ಪೋಲಿಸ್ ಠಾಣಾ ವ್ಯಾಪ್ತಿಯ ಮೇಜಪುರ ಗ್ರಾಮದಲ್ಲಿ ನಡೆದಿದೆ.
ಮದ್ಯವ್ಯಸನಿಯಾಗಿರುವ ದಿನೇಶ ಪಾಸಿ (35) ಕೃಷಿ ಬ್ಲೇಡ್ನಿಂದ ತನ್ನ ತಾಯಿ ಕಮಲಾ ದೇವಿ (65)ಯ ರುಂಡವನ್ನು ತುಂಡರಿಸಿ ಕೊಲೆ ಮಾಡಿದ್ದಾನೆ. ರುಂಡವಿಲ್ಲದ ಶವ ಮನೆಯ ಹೊರಗೆ ಪತ್ತೆಯಾಗಿದ್ದು, ಪರಾರಿಯಾಗಿರುವ ಆರೋಪಿಯ ಪತ್ತೆಗಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದು ಎಸ್ಪಿ ಚಕ್ರೇಶ ಮಿಶ್ರಾ ರವಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
Next Story





