ಉತ್ತರಪ್ರದೇಶದ ಘೋಸಿ ವಿಧಾನಸಭಾ ಉಪ ಚುನಾವಣೆ: ಇಂಡಿಯಾ ಅಭ್ಯರ್ಥಿಗೆ ಭಾರೀ ಮುನ್ನಡೆ

ಸಾಂದರ್ಭಿಕ ಚಿತ್ರ
ಲಕ್ನೊ: ಉತ್ತರ ಪ್ರದೇಶದ ಘೋಸಿ ವಿಧಾನಸಭಾ ಉಪಚುನಾವಣೆಯಲ್ಲಿ 15 ನೇ ಸುತ್ತಿನ ಎಣಿಕೆಯ ನಂತರ ಇಂಡಿಯಾ ಬ್ಲಾಕ್ (ಸಮಾಜವಾದಿ ಪಕ್ಷ+ಕಾಂಗ್ರೆಸ್) ಅಭ್ಯರ್ಥಿ ಸುಧಾಕರ್ ಸಿಂಗ್ ಅವರು ತಮ್ಮ ಬಿಜೆಪಿ ಪ್ರತಿಸ್ಪರ್ಧಿ ದಾರಾ ಸಿಂಗ್ ಚೌಹಾಣ್ ಅವರಿಗಿಂತ 20,715 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಸಿಂಗ್ ಇಲ್ಲಿಯವರೆಗೆ 58,771 ಮತಗಳನ್ನು ಗಳಿಸಿದ್ದರೆ, ಚೌಹಾಣ್ 38,056 ಪಡೆದಿದ್ದಾರೆ. 34 ಸುತ್ತಿನ ಮತ ಎಣಿಕೆ ನಡೆಯಲಿದೆ.
ಜಾರ್ಖಂಡ್ ನಲ್ಲಿ ಎನ್ ಡಿಎಗೆ ಮುನ್ನಡೆ
ಜಾರ್ಖಂಡ್ ನ ಡುಮ್ರಿ ವಿಧಾನಸಭಾ ಕ್ಷೇತ್ರದಲ್ಲಿ 12ನೇ ಸುತ್ತಿನ ಮತ ಎಣಿಕೆ ನಂತರ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್ ಡಿಎ) ಅಭ್ಯರ್ಥಿ ಯಶೋದಾ ದೇವಿ 5,707 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಇಂಡಿಯಾ ಬ್ಲಾಕ್ ಜಂಟಿ ಅಭ್ಯರ್ಥಿಯಾಗಿರುವ ಜಾರ್ಖಂಡ್ ಮುಕ್ತಿ ಮೋರ್ಚಾದ ಬೇಬಿ ದೇವಿ ಅವರು ಡುಮ್ರಿಯಲ್ಲಿ ಹಿನ್ನಡೆಯಲ್ಲಿದ್ದಾರೆ.
10ನೇ ಸುತ್ತಿನ ಉಪಚುನಾವಣೆ ಎಣಿಕೆ ಪೂರ್ಣಗೊಂಡಿದ್ದು, ಉತ್ತರಾಖಂಡದ ಬಾಗೇಶ್ವರ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಪಾರ್ವತಿ ದಾಸ್ ಮುನ್ನಡೆ ಕಾಯ್ದುಕೊಂಡಿದ್ದಾರೆ.





