ಉತ್ತರಾಖಂಡ : ಗುರುದ್ವಾರಾದ ಕರ ಸೇವಾ ಮುಖ್ಯಸ್ಥನ ಹತ್ಯೆ

Photo: PTI
ಡೆಹ್ರಾಡೂನ್ : ಉತ್ತರಾಖಂಡದ ಉಧಮ ಸಿಂಗ್ ನಗರ ಜಿಲ್ಲೆಯ ನಾನಕ್ಮಟ್ಟಾ ಪಟ್ಟಣದಲ್ಲಿಯ ಗುರುದ್ವಾರಾದ ಕರ ಸೇವಾ ಮುಖ್ಯಸ್ಥ ಬಾಬಾ ತರ್ಸೆಮ್ ಸಿಂಗ್ ಅವರನ್ನು ಗುರುವಾರ ಬೆಳಿಗ್ಗೆ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಬೆಳಿಗ್ಗೆ 6:30ರ ಸುಮಾರಿಗೆ ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯವನ್ನು ನಡೆಸಿದ್ದಾರೆ ಎಂದು ಪೋಲಿಸರು ತಿಳಿಸಿದರು.
ತೀವ್ರವಾಗಿ ಗಾಯಗೊಂಡಿದ್ದ ಸಿಂಗ್ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟರು.
ಹಂತಕರ ಬಂಧನಕ್ಕಾಗಿ ವಿಶೇಷ ಕಾರ್ಯಪಡೆಯೊಂದಿಗೆ ಹಲವಾರು ಪೋಲಿಸ್ ತಂಡಗಳನ್ನು ನಿಯೋಜಿಸಲಾಗಿದೆ. ಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನೂ ರಚಿಸಲಾಗುವುದು. ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಗೆ ವ್ಯತ್ಯಯವುಂಟಾಗಿಲ್ಲ ಎಂದು ಎಡಿಜಿಪಿ ಎ.ಪಿ.ಅಂಶುಮನ್ ತಿಳಿಸಿದರು.
Next Story





