ಭಾರತೀಯ ಮೂಲದ ಪ್ರಪ್ರಥಮ ಆಸ್ಟ್ರೇಲಿಯಾ ಸೆನೆಟರ್ ಆದ ವರುಣ್ ಘೋಷ್
ಇತಿಹಾಸ ನಿರ್ಮಿಸಿದ ಭಾರತೀಯ ಸಂಜಾತ ಆಸ್ಟ್ರೇಲಿಯಾ ಬ್ಯಾರಿಸ್ಟರ್

Photo: Linkedin/Francis Burt Chambers
ಸಿಡ್ನಿ: ಆಗಿರುವ ವರುಣ್ ಘೋಷ್, ಭಾರತೀಯ ಮೂಲದ ಪ್ರಪ್ರಥಮ ಆಸ್ಟ್ರೇಲಿಯಾ ಸೆನೆಟರ್ ಆಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರು ಪಶ್ಚಿಮ ಆಸ್ಟ್ರೇಲಿಯಾವನ್ನು ಪ್ರತಿನಿಧಿಸುತ್ತಿದ್ದಾರೆ. ಇದರೊಂದಿಗೆ ಅವರು ವಿಶ್ವ ಬ್ಯಾಂಕ್ ನೊಂದಿಗೂ ಸಹಯೋಗ ಹೊಂದಿದ್ದಾರೆ ಎಂದು indiatoday.in ವರದಿ ಮಾಡಿದೆ.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸೆನೆಟರ್ ಪ್ಯಾಟ್ರಿಕ್ ಡಾಡ್ಸನ್ ಅವರನ್ನು ನಿವೃತ್ತಿಗೊಳಿಸಲು ಫೆಬ್ರವರಿಯಲ್ಲಿ ಪಶ್ಚಿಮ ಆಸ್ಟ್ರೇಲಿಯಾ ಸಂಸತ್ತು ಕೈಗೊಂಡಿರುವ ನಿರ್ಣಯದಂತೆ ಅವರ ಬದಲಿಗೆ ಲೇಬರ್ ಪಾರ್ಟಿಯು ವರುಣ್ ಘೋಷ್ ಅನ್ನು ತನ್ನ ಸೆನೆಟರ್ ಆಗಿ ಅಧಿಕೃತವಾಗಿ ಆಯ್ಕೆ ಮಾಡಿದೆ.
“ಒಕ್ಕೂಟದ ಸಂಸತ್ತನ್ನು ಪಶ್ಚಿಮ ಆಸ್ಟ್ರೇಲಿಯಾ ಪರವಾಗಿ ಪ್ರತಿನಿಧಿಸಲು ಸೆನೆಟರ್ ವರುಣ್ ಘೋಷ್ ಅವರನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್ತು ಆಯ್ಕೆ ಮಾಡಿದೆ” ಎಂದು ಫೆಬ್ರವರಿ 1ರಂದು ಪಶ್ಚಿಮ ಆಸ್ಟ್ರೇಲಿಯಾದ ವಿಧಾನಸಭೆಯು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದೆ.
1980ರಲ್ಲಿ ಭಾರತದಿಂದ ಆಸ್ಟ್ರೇಲಿಯಾಗೆ ತಮ್ಮ ಪೋಷಕರು ವಲಸೆ ಬಂದ ನಂತರ, ತಮಗೆ 17 ವರ್ಷವಾಗಿದ್ದಾಗಲೇ ಲೇಬರ್ ಪಾರ್ಟಿಯನ್ನು ಸೇರ್ಪಡೆಯಾಗಿದ್ದ ವರುಣ್ ಘೋಷ್, ನರರೋಗ ತಜ್ಞರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು.
ವರುಣ್ ಘೋಷ್ ಸೆನೆಟರ್ ಆಗಿ ಆಯ್ಕೆಯಾಗಿರುವುದು ಅತ್ಯಂತ ಮಹತ್ವದ ಸಂಗತಿಯಾಗಿದ್ದು, ಅವರದನ್ನು ಗೌರವವೆಂದು ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ. ಪ್ರತಿಯೊಬ್ಬರಿಗೂ ಉನ್ನತ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿ ದೊರೆಯುವಂತಾಗಬೇಕು ಎಂದು ವರುಣ್ ಘೋಷ್ ದೃಢವಾಗಿ ನಂಬಿದ್ದಾರೆ.







