ಶಿವಸೇನೆ(ಯುಬಿಟಿ) ಜೊತೆ ವಿಬಿಎ ಮೈತ್ರಿ ಅಂತ್ಯ: ಪ್ರಕಾಶ್ ಅಂಬೇಡ್ಕರ್

ಉದ್ಧವ ಠಾಕ್ರೆ , ಪ್ರಕಾಶ್ ಅಂಬೇಡ್ಕರ್ | PC : PTI
ಛತ್ರಪತಿ ಸಂಭಾಜಿನಗರ : ಉದ್ಧವ ಠಾಕ್ರೆ ನೇತೃತ್ವದ ಶಿವಸೇನೆ ಜೊತೆಗೆ ತನ್ನ ಪಕ್ಷದ ಮೈತ್ರಿ ಅಂತ್ಯಗೊಂಡಿದೆ ಎಂದು ವಂಚಿತ ಬಹುಜನ ಅಘಾಡಿ (ವಿಬಿಎ)ಯ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಅವರು ಇಲ್ಲಿ ತಿಳಿಸಿದರು.
ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದ ವಿಬಿಎ ಲೋಕಸಭಾ ಚುನಾವಣೆಗಳಲ್ಲಿ ಸ್ಥಾನ ಹಂಚಿಕೆ ಕುರಿತು ಅಸಮಾಧಾನಗೊಂಡು ಅದರಿಂದ ಹೊರಬಂದಿತ್ತು. ಇಂಡಿಯಾ ಮೈತ್ರಿಕೂಟವನ್ನು ಸೇರುವ ಮುನ್ನ ಅದು ಶಿವಸೇನೆ (ಯುಬಿಟಿ) ಜೊತೆ ಮೈತ್ರಿ ಹೊಂದಿತ್ತು.
ಶಿವಸೇನೆ (ಯುಬಿಟಿ) ಜೊತೆ ಮೈತ್ರಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಅಂಬೇಡ್ಕರ್,ಮೈತ್ರಿಯು ಅಂತ್ಯಗೊಂಡಿದೆ,ಈಗ ಅದರಲ್ಲೇನೂ ಉಳಿದಿಲ್ಲ ಎಂದು ಉತ್ತರಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಮೊಮ್ಮಗನಾಗಿರುವ ಪ್ರಕಾಶ ಅಂಬೇಡ್ಕರ್ ಅಕೋಲಾ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರಾದರೂ ಬಿಜೆಪಿಯ ಅನೂಪ ಧೋತ್ರೆಯವರಿಂದ ಸೋಲನ್ನು ಅನುಭವಿಸಿದ್ದರು.
ಶಿವಸೇನೆ (ಯುಬಿಟಿ) ಮತ್ತು ವಿಬಿಎ ಜನವರಿ 2013ರಲ್ಲಿ ಮೈತ್ರಿ ಮಾಡಿಕೊಂಡಿದ್ದವು.
Next Story





