ಗೋಮೂತ್ರ ಪರ ಐಐಟಿ ಮದ್ರಾಸ್ ನಿರ್ದೇಶಕರ ವಕಾಲತ್ತು; ವಿಡಿಯೊ ವೈರಲ್

Screengrab of viral video (PC: X/@SubathraDevi_)
ಚೆನ್ನೈ: ಐಐಟಿ ಮದ್ರಾಸ್ ನಿರ್ದೇಶಕ ವಿ.ಕಾಮಕೋಟಿ ಗೋಮೂತ್ರದ ಪರ ವಕಾಲತ್ತು ವಹಿಸಿದ್ದು, ಅದರ ಔಷಧೀಯ ಗುಣಗಳನ್ನು ಕೊಂಡಾಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಗೋಮೂತ್ರ ಬ್ಯಾಕ್ಟೀರಿಯಾ ನಿರೋಧಕ, ಶಿಲೀಂಧ್ರಯ ನಿರೋಧಕ ಹಾಗೂ ಜೀರ್ಣಕಾರಕ ಗುಣಗಳನ್ನು ಹೊಂದಿದೆ ಎಂದು ಹೇಳಿರುವ ಕಾಮಕೋಟಿ, ಹೊಟ್ಟೆಯುರಿ ಸಮಸ್ಯೆಯಂತಹ ಆರೋಗ್ಯ ಸಮಸ್ಯೆಗಳಿಗೆ ಗೋಮೂತ್ರ ಸೂಕ್ತ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ ಗೋಮೂತ್ರದ ಔಷಧೀಯ ಗುಣಗಳನ್ನು ಪರಿಗಣಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಜನವರಿ 15ರಂದು ಮಾತು ಪೊಂಗಲ್ ಪ್ರಯುಕ್ತ ಗೋ ಸಂರಕ್ಷಣಾ ಶಾಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುವಾಗ, ಸನ್ಯಾಸಿಯೊಬ್ಬರು ತೀವ್ರ ಜ್ವರವಿದ್ದಾಗ ಗೋಮೂತ್ರ ಸೇವಿಸಿ ಹೇಗೆ ಚೇತರಿಸಿಕೊಂಡರು ಎಂಬ ಉದಾಹರಣೆ ನೀಡುವಾಗ ಅವರು ಮೇಲಿನಂತೆ ಹೇಳಿಕೆ ನೀಡಿದ್ದಾರೆ.
ಕಾಮಕೋಟಿಯವರ ಹೇಳಿಕೆಯ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಕಾರ್ತಿ ಪಿ. ಚಿದಂಬರಂ, “ಐಐಟಿ ಮದ್ರಾಸ್ ನಿರ್ದೇಶಕರು ನಕಲಿ ವಿಜ್ಞಾನವನ್ನು ಹರಡುತ್ತಿರುವುದು ಅಸಂಬದ್ಧವಾಗಿದೆ” ಎಂದು ಕಿಡಿ ಕಾರಿದ್ದಾರೆ.
ಕಾಮಕೋಟಿಯ ಹೇಳಿಕೆಯನ್ನು ದೃಢಪಡಿಸಿರುವ ಐಐಟಿ ಮದ್ರಾಸ್ ನ ಮೂಲಗಳು, ಓರ್ವ ಸಾವಯವ ಕೃಷಿಕರಾಗಿ ಅವರು ಗೋಶಾಲೆಯ ಕಾರ್ಯಕ್ರಮದಲ್ಲಿ ಮಾತನಾಡಿದ್ದರು ಹಾಗೂ ಅವರು ಹೇಳಿಕೆಯ ವ್ಯಾಪ್ತಿ ಹಿರಿದಾಗಿತ್ತು ಎಂದು ಸ್ಪಷ್ಟನೆ ನೀಡಿವೆ.
Peddling pseudoscience by @iitmadras Director is most unbecoming @IMAIndiaOrg https://t.co/ukB0jwBh8G
— Karti P Chidambaram (@KartiPC) January 18, 2025