ಬಿಜೆಪಿಯ ಹಿರಿಯ ನಾಯಕ ವಿಜಯ್ ಕುಮಾರ್ ಮಲ್ಹೋತ್ರಾ ನಿಧನ

ವಿಜಯ್ ಕುಮಾರ್ ಮಲ್ಹೋತ್ರಾ (Photo: X/@VPIndia)
ಹೊಸದಿಲ್ಲಿ: ಮಂಗಳವಾರ ಬೆಳಗ್ಗೆ ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಬಿಜೆಪಿಯ ಹಿರಿಯ ನಾಯಕ ವಿಜಯ್ ಕುಮಾರ್ ಮಲ್ಹೋತ್ರಾ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಐದು ಬಾರಿ ಸಂಸದರು ಹಾಗೂ ಎರಡು ಬಾರಿ ದಿಲ್ಲಿಯಿಂದ ಶಾಸಕರಾಗಿದ್ದ ವಿಜಯ್ ಮಲ್ಹೋತ್ರಾ, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಬಿಜೆಪಿ ಹಾಗೂ ಅದರ ಮಾತೃ ಪಕ್ಷ ಜನಸಂಘದ ಅತ್ಯಂತ ಚಿರಪರಿಚಿತ ಮುಖಗಳ ಪೈಕಿ ಒಬ್ಬರಾಗಿದ್ದರು. ಅವರು ದಿಲ್ಲಿ ಬಿಜೆಪಿ ಘಟಕದ ಅಧ್ಯಕ್ಷರೂ ಆಗಿದ್ದರು.
ಈ ಕುರಿತು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ಬಿಜೆಪಿ, “ವಿಜಯ್ ಮಲ್ಹೋತ್ರಾರ ಬದುಕು ಸರಳತೆ ಹಾಗೂ ಸಾರ್ವಜನಿಕ ಸೇವೆಗೆ ಒಂದು ಉದಾಹರಣೆಯಾಗಿತ್ತು. ಅವರು ಜನಸಂಘವನ್ನು ದಿಲ್ಲಿಯಲ್ಲಿ ವಿಸ್ತರಿಸಲು ಸಾಕಷ್ಟು ಕೆಲಸ ಮಾಡಿದ್ದರು” ಎಂದು ಸಂತಾಪ ಸೂಚಿಸಿದೆ.
ವಿಜಯ್ ಮಲ್ಹೋತ್ರಾ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಕಂಬನಿ ಮಿಡಿದಿದ್ದಾರೆ.
Next Story





