ವೈಮಾನಿಕ ದುರಂತದಲ್ಲಿ ಮಡಿದ ಗುಜರಾತ್ ನ ಎರಡನೇ ಮಾಜಿ ಸಿಎಂ ವಿಜಯ್ ರೂಪಾನಿ
ಮೊದಲ ಸಿಎಂ ಯಾರು ಗೊತ್ತಾ?

PC | PTI
ಹೊಸದಿಲ್ಲಿ: ವಿಜಯ್ ರೂಪಾನಿ ಅವರು ಅಹ್ಮದಾಬಾದ್ ನಲ್ಲಿ ಗುರುವಾರ ಸಂಭವಿಸಿದ ವಿಮಾನದ ದುರಂತದಲ್ಲಿ ಮೃತಪಟ್ಟಿದ್ದಾರೆ. ಈ ಘಟನೆಯು ಗುಜರಾತ್ ನ ಹಾಲಿ ಅಥವಾ ಮಾಜಿ ಸಿಎಂಗಳು ವೈಮಾನಿಕ ದುರಂತದಲ್ಲಿ ಅಂತ್ಯ ಕಂಡ ಎರಡನೆಯದೆಂದು ದಾಖಲಾಗಿದೆ.
ಭಾರತ ಪಾಕಿಸ್ತಾನ ಯುದ್ಧದ ಸಂದರ್ಭ ಗುಜರಾತ್ ನ ಎರಡನೇ ಸಿಎಂ ಆಗಿದ್ದ ಬಲವಂತ್ ರಾಯ್ ಮೆಹ್ತಾ ಅವರು ಸೆಪ್ಟೆಂಬರ್ 19, 1965 ರಂದು ಅಹ್ಮದಾಬಾದ್ ನಿಂದ ಮಿಥಾಪುರ್ ಗೆ ಸಣ್ಣ ಬೀಚ್ ಕ್ರಾಫ್ಟ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಪಾಕಿಸ್ತಾನಿ ವಾಯುಪಡೆ ನಡೆಸಿದ ದಾಳಿಯಲ್ಲಿ ಬಲಿಯಾಗಿದ್ದರು.
ಮೆಹ್ತಾ ಅವರು ಪ್ರಯಾಣಿಸುತ್ತಿದ್ದ ವಿಮಾನವನ್ನು ಯುದ್ಧ ವಿಮಾನ ಎಂದು ಭಾವಿಸಿ ಗಡಿ ಪ್ರದೇಶವಾದ ರಣ್ ಆಫ್ ಕಚ್ ಬಳಿ ಪಾಕಿಸ್ತಾನ ದಾಳಿ ಮಾಡಿತ್ತು. ಅದರಲ್ಲಿ ಮೆಹ್ತಾ, ಅವರ ಪತ್ನಿ ಸರೋಜ ಬೆನ್, ಸಹಾಯಕರು, ಓರ್ವ ಪತ್ರಕರ್ತ ಹಾಗು ಇಬ್ಬರು ವಿಮಾನ ಸಿಬ್ಬಂದಿ ಬಲಿಯಾಗಿದ್ದರು.
ಘಟನೆ ನಡೆದು ನಲವತ್ತಾರು ವರ್ಷಗಳ ನಂತರ ಪಾಕಿಸ್ತಾನಿ ಯುದ್ಧ ವಿಮಾನದ ಪೈಲಟ್, ಬೀಚ್ಕ್ರಾಫ್ಟ್ನ ಮುಖ್ಯ ಪೈಲಟ್ನ ಮಗಳಿಗೆ ಪತ್ರ ಬರೆದು ಈ ಘಟನೆಗೆ ಕ್ಷಮೆಯಾಚಿಸಿದ್ದರು. ತನ್ನ ತಂದೆಯ ಕೊಲೆಗಾರರನ್ನು ಅವರು ಕ್ಷಮಿಸಿದ್ದರು ಎಂದು indiatoday ವರದಿ ತಿಳಿಸಿದೆ.







