ಪ್ರೊಫೆಸರ್ ಅಲಿ ಖಾನ್ ಅವರ ಪೋಸ್ಟ್ ಹಂಚಿಕೊಂಡು ಇದು ಬಂಧನಕ್ಕೆ ಅರ್ಹವೇ ಎಂದು ಪ್ರಶ್ನಿಸಿದ ವಿಶಾಲ್ ದದ್ಲಾನಿ

ವಿಶಾಲ್ ದದ್ಲಾನಿ (Photo credit: Ronny Sequeira/Facebook)
ಹೊಸದಿಲ್ಲಿ : ಆಪರೇಷನ್ ಸಿಂಧೂರ ಕಾರ್ಯಚರಣೆ ಕುರಿತ ಪತ್ರಿಕಾಗೋಷ್ಠಿ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಅಶೋಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ಅವರನ್ನು ಬಂಧಿಸಲಾಗಿದೆ. ಪ್ರೊಫೆಸರ್ ಅಲಿ ಖಾನ್ ಅವರ ಬಂಧನಕ್ಕೆ ಕಾರಣವಾದ ಪೋಸ್ಟ್ ಹಂಚಿಕೊಂಡ ಗಾಯಕ, ಸಂಗೀತ ಸಂಯೋಜಕ ವಿಶಾಲ್ ದದ್ಲಾನಿ, ಈ ಪೋಸ್ಟ್ ತಪ್ಪಾ ಅಥವಾ ಬಂಧನಕ್ಕೆ ಅರ್ಹವೇ? ಎಂದು ಪ್ರಶ್ನಿಸಿದರು.
ವಿಶಾಲ್ ದದ್ಲಾನಿ ಈ ಕುರಿತು ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ತಪ್ಪಾ ಅಥವಾ ಬಂಧನಕ್ಕೆ ಅರ್ಹವೇ? ಎಂದು ಪ್ರಶ್ನಿಸಿದರು.
ಹರ್ಯಾಣದ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯೋಗೇಶ್ ಜಥೇರಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ಅವರನ್ನು ಬಂಧಿಸಿದ್ದರು.
ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ಪತ್ರಿಕಾಗೋಷ್ಠಿಯನ್ನು ಅವರು ʼದೃಗ್ವಿಜ್ಞಾನʼ ಎಂದು ಬಣ್ಣಿಸಿದ್ದರು. ʼದೃಗ್ವಿಜ್ಞಾನʼ ನೆಲದ ಮೇಲೆ ವಾಸ್ತವಕ್ಕೆ ಭಾಷಾಂತರಿಸಲ್ಪಡಬೇಕು ಇಲ್ಲದಿದ್ದರೆ ಅದು ಕೇವಲ ಬೂಟಾಟಿಕೆ ಎಂದು ಹೇಳಿದ್ದರು. ಹಲವು ಬಲಪಂಥೀಯರು ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಶ್ಲಾಘಿಸುತ್ತಿರುವುದನ್ನು ನೋಡಿ ನನಗೆ ಬಹಳ ಸಂತೋಷವಾಗಿದೆ. ಬಹುಶಃ ಅವರು ಗುಂಪು ಹತ್ಯೆಗಳು, ಅನಿಯಂತ್ರಿತ ಬುಲ್ಡೋಝರ್ ಕಾರ್ಯಾಚರಣೆ ಮತ್ತು ಬಿಜೆಪಿಯ ದ್ವೇಷ ಪ್ರಚಾರಕ್ಕೆ ಬಲಿಯಾದ ಇತರರನ್ನು ಭಾರತೀಯ ನಾಗರಿಕರಾಗಿ ರಕ್ಷಿಸಬೇಕೆಂದು ಒತ್ತಾಯಿಸಬಹುದುʼ ಎಂದು ಹೇಳಿದ್ದರು.
ವಿಶಾಲ್ ದದ್ಲಾನಿ ಪೋಸ್ಟ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ʼಈ ಕುರಿತು ಪ್ರತಿಕ್ರಿಯಿಸಿದ ವ್ಯಕ್ತಿಯೋರ್ವರು, ಈ ಪೋಸ್ಟ್ ಇಂಗ್ಲಿಷ್ನಲ್ಲಿ ಬರೆಯಲಾಗಿದೆ ಮತ್ತು ಬಿಜೆಪಿಗರು ಅನಕ್ಷರಸ್ಥರು, ಅದೇ ಪೋಸ್ಟ್ನಲ್ಲಿ ತಪ್ಪಾಗಿದೆ ʼಎಂದು ಹೇಳಿದರು.
ʼಪೊಲೀಸರು ಅವರನ್ನು ಏಕೆ ಕರೆಸಿ ವಿಚಾರಣೆ ಮಾಡಬಾರದು? ಅವರು ಕಾನೂನಿಗಿಂತ ಮಿಗಿಲಾದವರಾ? ಪಹಲ್ಗಾಮ್ ದಾಳಿಗಾಗಿ ಅವರು ಇಷ್ಟು ಉದ್ದವಾದ ಪೋಸ್ಟ್ ಬರೆದಿಲ್ಲ. ಆದರೆ, ಈಗ ಶಾಂತಿಯನ್ನು ಬಯಸುತ್ತಾರೆʼ ಎಂದು ಮತ್ತೋರ್ವರು ಪ್ರತಿಕ್ರಿಯಿಸಿದ್ದಾರೆ.







