ವಯನಾಡ್ ಭೂಕುಸಿತ | ಮುನ್ನೆಚ್ಚರಿಕೆ ನೀಡಿದ್ದ ಹ್ಯೂಮ್ ಸೆಂಟರ್

PC : PTI
ಕೊಚ್ಚಿ : ಎರಡು ಗ್ರಾಮಗಳನ್ನು ಧ್ವಂಸಗೊಳಿಸಿದ ಭೂಕುಸಿತ ಸಂಭವಿಸುವ 16 ಗಂಟೆಗಳಿಗೆ ಮುನ್ನ ಮುಂಡಕ್ಕೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಕುರಿತು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಲಾಗಿತ್ತು ಎಂದು ಕಲ್ಪಟ್ಟಾ ಮೂಲದ ಹ್ಯೂಮ್ ಸೆಂಟರ್ ಫಾರ್ ಇಕಾಲಜಿ ಆ್ಯಂಡ್ ವೈಲ್ಡ್ ಲೈಫ್ ಬಯಾಲಜಿ ತಿಳಿಸಿದೆ.
‘‘ದಿನನಿತ್ಯ ದತ್ತಾಂಶ ಪೂರೈಸಲು ನಾವು 200ಕ್ಕೂ ಅಧಿಕ ಹವಾಮಾನ ಕೇಂದ್ರಗಳೊಂದಿಗೆ ವಯನಾಡ್ನಲ್ಲಿ ಸಮಗ್ರ ಮಳೆ ನಿಗಾ ವ್ಯವಸ್ಥೆಯನ್ನು ಹೊಂದಿದ್ದೇವೆ. ಮುಂಡುಕ್ಕೈಗೆ ಸಮೀಪ ಇರುವ ಹವಾಮಾನ ಕೇಂದ್ರ ಪತುಮಲದಲ್ಲಿ ರವಿವಾರ 200 ಮಿ.ಮೀ. ಮಳೆ ಸುರಿದಿದೆ. ರಾತ್ರಿಯಿಡೀ ಮತ್ತೆ 130 ಎಂಎಂ ಮಳೆ ಸುರಿದಿದೆ. ಅಂದಾಜು 600 ಎಂಎಂ ಮಳೆ ಸುರಿದರೆ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂಬುದು ಗಮನ ಹರಿಸಬೇಕಾದ ವಿಚಾರ. ಮುಂದೆ ಸುರಿಯುವ ಮಳೆಯಿಂದಾಗಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ನಾವು ಪ್ರಾಮಾಣಿಕವಾಗಿ ಮುನ್ನೆಚ್ಚರಿಕೆ ನೀಡಿದ್ದೆವು’’ ಎಂದು ಹ್ಯೂಮ್ ನಿರ್ದೇಶಕ ಸಿ.ಕೆ. ವಿಷ್ಣುದಾಸ್ ತಿಳಿಸಿದ್ದಾರೆ.





