ಪ.ಬಂಗಾಳ: ಸಂದೇಶಖಾಲಿ ಪ್ರಕರಣ; ಆರೋಪಿ ಶಹಾಜಹಾನ್ ಶೇಖ್ ಬಂಧನ

ಶಹಜಹಾನ್ ಶೇಖ್ | Photo: telegraphindia.com
ಹೊಸದಿಲ್ಲಿ: ಸಂದೇಶಖಾಲಿ ಲೈಂಗಿಕ ಕಿರುಕುಳ ಮತ್ತು ಭೂ ಕಬಳಿಕೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಟಿಎಂಸಿ ಮುಖಂಡ ಶಹಾಜಹಾನ್ ಶೇಖ್ ನನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂದೇಶಖಾಲಿಯಲ್ಲಿ ಶೇಖ್ ನನ್ನು ಸೆರೆಹಿಡಿಯಲಾಯಿತು ಎಂದು ಹೇಳಲಾಗಿದೆ. ಆರೋಪಿಯನ್ನು ಸ್ಥಳೀಯ ನ್ಯಾಯಾಲಯದಲ್ಲಿ ಗುರುವಾರ ಹಾಜರುಪಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.
Next Story





